ಮೆಟ್ರೋ ಸಿಟಿಯಲ್ಲಿ ಗುಬ್ಬಚ್ಚಿಗಳಿಗೆ ಬೆಚ್ಚನೆ ಗೂಡು
ಆರಾಧ್ಯ
ಸಿಲಿಕಾನ್ ಸಿಟಿ ತುಂಬಾ ಬರೀ ಕಾಂಕ್ರಿಟ್ ಕಟ್ಟಡಗಳೇ ತುಂಬೀ ಹೋಗಿದೆ. ಈ ಮಧ್ಯೆ ಹಕ್ಕಿಗಳನ್ನ ನೋಡೊದೇ ಕಷ್ಟವಾಗಿದೆ. ಅದ್ರಲ್ಲೂ ಗುಬ್ಬಚ್ಚಿ ನೋಡಬೇಕು ಅಂದ್ರೆ ಫೋಟೋದಲ್ಲೊ, ಗೂಗಲ್ ನಲ್ಲೊ ನೋಡಬೇಕು, ಅದ್ರೆ ಇದೇ ಕಾಂಕ್ರಿಟ್ ಕಾಡಿನಲ್ಲಿ ಗುಬ್ಬಚ್ಚಿಗಳ ಚಿಂವ್ ಚಿಂವ್ ಕಲರವ ಕೇಳುತ್ತೆ. ಅದೆಲ್ಲಿ ಅಂತೀರಾ !

ಕಣ್ಮರೆಯಾಗುತ್ತಲೇ ಇರುವ ಗುಬ್ಬಿ ಸಂಕುಲ ರಾಜಧಾನಿಯ ಸಗಾಯ್ ಪುರ ವಾರ್ಡ್ನಲ್ಲಿ ಕಾಣಬಹುದು. ಬೆಂಗಳೂರಿನ ಹೃದಯ ಭಾಗದಲ್ಲಿರುವ ಲಿಂಗರಾಜಪುರ ಫ್ಲೈಓವರ್ ಪಕ್ಕದಲ್ಲಿರುವ ನ್ಯೂ ಬಾಗಲೂರು ಬಡಾವಣೆಯ ಎಡ್ವಿನ್ ಜೋಸೆಫ್ ಎಂಬ ಗುಬ್ಬಚ್ಚಿ ಪ್ರೇಮಿ ತಮ್ಮ ಮನೆಯ ಆವರಣವನ್ನೇ ಮೀಸಲಿಟ್ಟಿದ್ದಾರೆ. ಸುಮಾರು 20 ವರ್ಷಗಳಿಂದ ತಮ್ಮ ಸಮಯವನ್ನು ಗುಬ್ಬಿಗಳ ಆಹಾರ, ಆರೈಕೆಗೆ ಮೀಸಲಿಟ್ಟು ಅವುಗಳನ್ನ ಪೋಷಿಸುತ್ತಿದ್ದಾರೆ.
ಸಂಪ್ರದಾಯವೆಂಬ ಸಂಕೋಲೆಯಿಂದ ಮುಕ್ತಿ - ಅಫ್ಘಾನ್ ಮಹಿಳೆಯರ ಸಬಲೀಕರಣಕ್ಕೆ ಯುವತಿಯ ಹೋರಾಟ
ಮನೆಯ ಮುಂದೆ ಇರುವ ಲಿಂಬೆ ಗಿಡ, ದಾಸವಾಳದ ಮರದ ರೆಂಬೆಕೊಂಬೆಗಳೇ ಗುಬ್ಬಿಗಳ ಆವಾಸಸ್ಥಾನವಾಗಿದೆ. ಇವುಗಳಿಗೆ ನೆಲೆ ಕೊಡುವುದ ಜೊತೆಗೆ ಪ್ರತಿದಿನ ನಾನಾ ಬಗ್ಗೆಯ ಆಹಾರ, ಕುಡಿಯುವ ನೀಡು, ಮೊಟ್ಟೆ ಇಟ್ಟು ಮರಿ ಮಾಡಲು ವ್ಯವಸ್ಥೆಯನ್ನ ಮಾಡಿದ್ದಾರೆ ಎಡ್ವಿನ್. ಸುಮಾರು 250ಕ್ಕೂ ಹೆಚ್ಚು ಗುಬ್ಬಿಗಳು ಚಿಂವ್ ಚಿಂವ್ ಕಲರವ ಸುತ್ತ ಮುತ್ತಲಿನ ಮಕ್ಕಳನ್ನ ಆಕರ್ಷಿಸುತ್ತಿದೆ.

ಇವರಿಗೆ ಬಾಲ್ಯದಿಂದಲು ಹಕ್ಕಿಗಳ ಮೇಲೆ ಬಹಳಷ್ಟು ಮೋಹ. ಒಂದು ದಿನ ಅವರ ಮನೆಯ ಪಕ್ಕ ಖಾಲಿ ನಿವೇಶನದಲ್ಲಿ ಸ್ವಚ್ಛಗೊಳಿಸಿ ಎಸೆದ ಕಾಳು ತಿನ್ನಲು ಗುಬ್ಬಿಗಳು ಬರತ್ತಿದ್ದವು. ಇದನ್ನು ನೋಡಿದ ಇವರು ಅವುಗಳಿಗೆ ದಿನವೂ ಆಹಾರ ಹಾಕಲು ರೂಢಿ ಮಾಡಿಕೊಂಡರು. ಇದೀಗ ಇವುಗಳನ್ನು ತಮ್ಮ ಸ್ವತಃ ಮಕ್ಕಳನ್ನು ನೋಡಿಕೊಳ್ಳುವಂತೆ ಗುಬ್ಬಿನಗಳನ್ನ ಸಲುಹುತ್ತಿದ್ದಾರೆ..

ಗುಬ್ಬಿಗಳ ರಕ್ಷಣೆಗೆ ಬೇಲಿ ಹಾಕಿರುವ ಎಡ್ವಿನ್ ಇವುಗಳಿಗೆ ಬೇಕಾಗುವ ಆಹಾರ ಒದಗಿಸಲು 10ಕ್ಕೂ ಹೆಚ್ಚು ಆಹಾರ ಪೆಟ್ಟಿಗೆಗಳನ್ನು ತಮ್ಮ ಮನೆ ಮುಂದೆ ನೇತು ಹಾಕಿ, ಗುಬ್ಬಿಗಳು ಕೂರಲು ವ್ಯವಸ್ಥೆಯನ್ನ ಕಲ್ಪಿಸಿದ್ದಾರೆ. ಪ್ರತಿದಿನ ತಮ್ಮ ಮನೆಯ ಕಾಂಪೌಂಡ್ ಸುತ್ತಲು ತರಹೇವಾಗಿ ಆಹಾರವನ್ನು ನಿಯಮಿತವಾಗಿ ಒದಗಿಸುವ ಎಡ್ವಿನ್ ಹಾಗೂ ಅವರ ಪತ್ನಿ ಸಾರಾ ಇದನ್ನೇ ಕಾಯಕವನ್ನಾಗಿ ರೂಢಿಸಿಕೊಂಡಿದ್ದಾರೆ. ಇನ್ನು ಮನೆಯ ಗೋಡೆಗಳ ಮೇಲೆ 10 ಮಡಕೆ ಕಟ್ಟಿ, ಅದರೊಳಗೆ ಮೊಟ್ಟೆಯಿಡಲು ಅನುವು ಮಾಡಿದ್ದಾರೆ.. ಹೀಗಾಗಿ ಗುಬ್ಬಿಗಳು ಅಲ್ಲಿ ತಮ್ಮ ಸಂತಾನವನ್ನ ಬೆಳೆಸುತ್ತಲೇ ಇವೆ.
ಇನ್ನು ಗುಬ್ಬಿಗಳಿಗೆ ಯಾವ ಸಮಯದಲ್ಲಿ ಏನು ಆಹಾರ, ಯಾವ ರೀತಿ ನೀರಿನ ವ್ಯವಸ್ಥೆ ಒದಗಿಸಬೇಕು ಎಂದು ತಮ್ಮ ಮನೆಯ ಕಾಂಪೌಂಡ್ ಮೇಲೆ ವೇಳಾಪಟ್ಟಿ ಬರೆದಿಟ್ಟಿದ್ದಾರೆ. ಒಂದೊಂದು ಹೊತ್ತಿನಲ್ಲಿ ಒಂದೊಂದು ಆಹಾರವನ್ನು ಅಭ್ಯಾಸ ಮಾಡಿಸಿದ್ದಾರೆ ಎಡ್ವಿನ್. ಮಾರ್ಚ್ 20ರಂದು ವಿಶ್ವ ಗುಬ್ಬಿಗಳ ದಿನದ ಆಚರಣೆ ಸಂದರ್ಭದಲ್ಲಿ ಅಕ್ಕಪಕ್ಕದ ನಿವಾಸಿಗಳ ಜೊತೆ ಸೇರಿ ಹಬ್ಬವನ್ನು ಆಚರಿಸುತ್ತವೆ.
ಪ್ರತಿದಿನ ಗುಬ್ಬಿಗಳಿಗೆ 3 ರಿಂದ 4ಕ್ಕೂ ಬಾರಿ ಆಹಾರ ಒದಗಿಸುತ್ತೇವೆ. ಇದಕ್ಕೆ ಒಂದು ಸಾವಿರ ರೂ ತಗಲುತ್ತದೆ. ತಮಗೆ ಬರುವ 1600 ವಿಶ್ರಾಂತಿ ವೇತನದಲ್ಲಿ ಗುಬ್ಬಿಗಳಿಗೆ ಆಹಾರ ಒದಗಿಸುವ ಉದಾರತೆ ಇವರದ್ದು. ಇನ್ನು ಮಕ್ಕಳಿಗೆ ಗುಬ್ಬಿಯ ಬಗ್ಗೆ ಮಾಹಿತಿಯನ್ನ ನೀಡ್ತಾರೆ. ಜೊತೆಗೆ ಗುಬ್ಬಿಗಳನ್ನು ಮಕ್ಕಳಿಗೆ ತೋರಿಸಬೇಕೆಂಬ ಅಭಿಲಾಶೆ ಇರುವ ಪೋಷಕರು ನಮ್ಮ ಮನೆ ಬಳಿ ಬನ್ನಿ ಎಂದು ತಮ್ಮ ದೂರವಣಿ ಸಂಖ್ಯೆಯನ್ನ ನೀಡ್ತಾರೆ ಎಡ್ವಿನಿ ಹಾಗೂ ಅವರ ಧರ್ಮ ಪತ್ನಿ ಸಾರಾ.
1. ಎರಡು ಬಾರಿ ಕ್ಯಾನ್ಸರ್ ಗೆದ್ದ ಗಟ್ಟಿಗಿತ್ತಿ ನೀಲಂ ಕುಮಾರ್