ಹೊಸ ಮನೆ ಕಟ್ಟುವಾಗ, ಹಳೆಯ ಮನೆಯ ಬಾಗಿಲು ಕಿಟಕಿಗಳನ್ನು ತಂದು ಬಳಸುವವರು ನಗರದಲ್ಲಿದ್ದಾರೆ. ಆ್ಯಂಟಿಕ್ ವಸ್ತುಗಳನ್ನು ಖರೀದಿಸಿ ಇಟ್ಟುಕೊಳ್ಳುವುದು ಈಗಿನ ಹೊಸ ಟ್ರೆಂಡ್. ಇಂತಹ ವಸ್ತುಗಳನ್ನು ಮಾರಾಟ ಮಾಡುವ ಕೆಲವೇ ಕೆಲವು ಕೇಂದ್ರಗಳು ಬೆಂಗಳೂರಿನಲ್ಲಿದೆ, ಅದ್ರಲ್ಲಿ ಎಮ್ ಜಿ ರಸ್ತೆಯಲ್ಲಿ ಇರುವ ನವರತ್ನ ಆ್ಯಂಟಿಕ್ ಶಾಪ್ ಕೂಡ ಒಂದು. ಈ ಶಾಪ್ ನಲ್ಲಿ ಇದೀಗ ದೇಶ ವಿದೇಶದ ಸುಮಾರು 1000ಕ್ಕೂ ಹೆಚ್ಚು ಹೊಸ ಹೊಸ ಆ್ಯಂಟಿಕ್ ಪೀಸ್ ಗಳು ಲಗ್ಗೆ ಇಟ್ಟಿದೆ.
.jpg?fm=png&auto=format&w=800)
ಆ್ಯಂಟಿಕ್ ಪೀಸ್ ಎಂದರೆ ಸಾಕು ಆ ವಸ್ತುವನ್ನು ಕೊಳ್ಳಲೇಬೇಕು ಎಂದು ಮನಸಾಗುತ್ತದೆ. ಹಣವಿದ್ದವರಿಗೆ ಆ್ಯಂಟಿಕ್ ವಸ್ತುಗಳನ್ನು ಇಟ್ಟುಕೊಳ್ಳುವುದು ಪ್ರತಿಷ್ಠೆಯ ವಿಷಯ. ನೂರಾರು ವರ್ಷ ಹಳೆಯದಾದ ಮರದ ಪರಿಕರಗಳನ್ನು ಮಾರಾಟ ಮಾಡುವುದು ಈಗೀಗಾ ಹೆಚ್ಚಾಗುತ್ತಿದೆ. ಮೊದಲ ನೋಟಕ್ಕೆ ಇವುಗಳನ್ನ ನೋಡಿದ್ರೆ ಇವುಗಳ ಮಹತ್ವ ತಿಳಿಯುತ್ತದೆ. ಈ ನಿಟ್ಟಿನಲ್ಲಿ ಆ್ಯಂಟಿಕ್ ಪೀಸ್ ಗಳ ವಿನೂತ ಅಂಗಡಿ ನಗರದಲ್ಲಿ ಪ್ರಾರಂಭವಾಗಿದೆ. ಈ ಅಂಗಡಿಯೊಳಗೆ ಒಮ್ಮೆ ಕಣ್ಣು ಹಾಡಿಸಿದ್ರೆ ಸಾಕು, ಎಂತವರು ಕೂಡ ಕ್ಲೀನ್ ಬೋರ್ಡ್ ಆಗುತ್ತಾರೆ. ಇಲ್ಲಿ ಇರುವ ಈ ಆ್ಯಂಟಿಕ್ ವಸ್ತುಗಳು ಕೇವಲ ಭಾರತ ದೇಶದು ಮಾತ್ರವಲ್ಲ, ಬೇರೆ ಬೇರೆ ದೇಶಗಳ ಬಹಳಷ್ಟು ವಸ್ತುಗಳನ್ನು ಸಂಗ್ರಹ ಮಾಡಿ ಮಾರಾಟಕ್ಕೆ ಇಟ್ಟಿದ್ದಾರೆ. ಇವುಗಳನ್ನ ನೋಡಕ್ಕೆ ಎಷ್ಟು ಸುಂದರವಾಗಿದ್ಯೋ, ಅಷ್ಟು ದುಬಾರಿ ಇದೆ. ಇವುಗಳ ಬೆಲೆ 3 ಸಾವಿರ ರೂ ಇಂದ 25 ಲಕ್ಷದ ವರೆಗೂ ವಸ್ತುಗಳು ಮಾರಟಕ್ಕಿವೆ.

ಹಳೆಯ ಕಾಲದ ಐಷಾರಾಮಿ ಪೀಠೋಪಕರಣಗಳಾದ ಮೇಜು, ಕುರ್ಚಿ, ಹೈ ಪೈ ಡೈನಿಂಗ್ ಟೇಬಲ್, ಹೈ ಫೈ ಮಂಚ, ಬೃಹತ್ ಗಾತ್ರದ ಮರದ ಪೆಟ್ಟಿಗೆಗಳು, ಮಾರ್ಬಲ್ ಟೇಬಲ್, ಡ್ರೆಸಿಂಗ್ ಟೇಬಲ್, ಸುಂದರ ಕೆತ್ತನೆಗಳ ಚೌಕಟ್ಟಿರುವ ಕನ್ನಡಿಗಳು ಹೈಪೈ ಸೋಫಾ ಹೀಗೆ ಸುಮಾರು 1000ಕ್ಕೂ ಹೆಚ್ಚು ಬಗೆಯ ವಸ್ತುಗಳು ಬಹಳ ಆಕರ್ಷಕವಾಗಿದೆ. ಒಟ್ನಲ್ಲಿ ಈ ಆ್ಯಂಟಿಕ್ ಪೀಸ್ ಗಳ ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಅಂದ್ರೆ ಲಕ್ಷ ಲಕ್ಷ ರೂಪಾಯಿ ಕೊಟ್ಟು ಇವುಗಳನ್ನ ಖರೀದಿ ಮಾಡಿ ಮನೆಯಲ್ಲಿ ಶೋಗೆ ಇಡುತ್ತಾರೆ. ಹಾಗಾಗಿ ಆ್ಯಂಟಿಕ್ ವಸ್ತುಗಳ ಮಾರಾಟ ಕೂಡ ಬೆಂಗಳೂರಿನಲ್ಲಿ ದೊಡ್ಡ ಉದ್ಯಮವಾಗಿ ಬೆಳೆದಿದೆ.

ಒಂದು ಕಡೆ ಹೊಸ ಮನೆ ಕಟ್ಟುವ ಭರದಲ್ಲಿ ಮನೆಯ ಮರದ ವಸ್ತುಗಳನ್ನು ಹಿತ್ತಲ ಮೂಲೆಗೆಸೆಯುವವರು. ಇನ್ನೊಂದೆಡೆ ಅದೇ ವಸ್ತುಗಳನ್ನು ಆ್ಯಂಟಿಕ್ ಪೀಸ್ ಎಂದು ಮಾರಾಟ ಮಾಡುವವರು ಮತ್ತು ಕೊಳ್ಳುವವರು. ಅನೇಕ ವರ್ಷಗಳಿಂದ ಬಳಸಿದ ವಸ್ತುಗಳು ಸುಸ್ಥಿತಿಯಲ್ಲಿದ್ದರೂ ಹೊಸ ವಸ್ತುವನ್ನು ಕೊಂಡು ತರುವುದರಲ್ಲಿ ಏನೋ ಸುಖ ಕೆಲವರಿಗೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದು ಎಂದರೆ ಇದೇ ಇರಬೇಕು. ಹಾಗಾಗಿಯೇ ನಾಗರೀಕತೆ ಬೆಳೆದಂತೆಲ್ಲ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಸಾಗಿದೆ.

ಇದನ್ನು ತಿಳಿದ ನವರತ್ನ ಆ್ಯಂಟಿಕ್ ಶಾಪ್ ನ ಮಾಲೀಕರು ಈ ಹೊಸ ಉದ್ಯಮಕ್ಕೆ ಕೈ ಹಾಕಿ ಯಶಸ್ಸು ಕಂಡಿದ್ದಾರೆ. ಈ ಹಿನ್ನಲೆ ಬೇರೆ ಬೇರೆ ದೇಶಗಳಿಂದ ಶಾಪ್ ಗೆ ಬಹಳಷ್ಟು ಐಷಾರಾಮಿ ಪೀಟೋಪಕರಣಗಳನ್ನ ಆಮದು ಮಾಡಿಕೊಂಡಿದ್ದಾರೆ. ಈ ಶಾಪ್ ನಲ್ಲಿ ಮೂರು ವಿಭಾಗಗಳು ಇವೆ ಒಂದೊಂದರಲ್ಲಿ ಒಂದೊಂದು ಬಗೆಯ ವಸ್ತುಗಳನ್ನ ಡಿಸ್ ಪ್ಲೇ ಮಾಡಿದ್ದಾರೆ. ಕಾರಣ ಹಳೆಯ ವಸ್ತುಗಳು ನೀಡುವ ಸುಖ ಹೊಸದರಲ್ಲಿ ಸಿಗುವುದಿಲ್ಲ. ಅದರಲ್ಲೂ ಮರದ ಪೀಠೋಪಕರಣಗಳ ಗತ್ತೇ ಬೇರೆ. ಅವು ಎಂದಿಗೂ ತಮ್ಮ ಹೊಳಪು ಕಳೆದುಕೊಳ್ಳುವುದಿಲ್ಲ. ಹತ್ತಾರು ವರ್ಷ ಬಳಸಿದ ನಂತರ ಎಣ್ಣೆಯ ಪಾಲಿಷ್ ಮಾಡಿದರೆ ಹೊಸದರಂತೆ ಕಾಣುತ್ತದೆ.