ರೀತು ಗೊರೈ ಜೊತೆ ಎಂಒಒ ಆಗಿ, ತಾಯ್ತನದ ಸಲಹೆ ಪಡೆಯಿರಿ
ಆರ್.ಪಿ.
ಜಾಮ್ನ ವಾರದ ವೇಳಾಪಟ್ಟಿ ಕಾಣುವುದು ಹೀಗೆ:
ಮೇಕ್ ಅಪ್ ಶೇಕ್ಅಪ್ ಮಂಡೇ: ಮೇಕ್ಅಪ್, ಫಿಟ್ನೆಸ್ ಅಥವಾ ವೆಲ್ನೆಸ್ ಬಗ್ಗೆ ಸಲಹೆ ಹಂಚಿಕೆ
ತಡ್ಕಾ ಟ್ಯೂಸ್ಡೇ: ಪಾಕವಿಧಾನ ಮತ್ತು ಅಡುಗೆ ಮಾಡುವ ಸಲಹೆ ಕಳಿಸಲಾಗುವುದು
ವೆಡ್ಸೆಸ್ ಡೇ ವಿಸ್ಡಂ: ಸೆಕ್ಸ್ ಮತ್ತು ಲೈಂಗಿಕ ಶಿಕ್ಷಣದ ಬಗ್ಗೆ ಅರಿವು
ಗುರುವಾರ ಜ್ಞಾನ್: ಪ್ರೇರಕ ಸಲಹೆ/ಇ-ಲಿಂಕ್ಸ್, ನಂಬಿಕೆಗಳನ್ನು ಆಂತರಿಕ ಸಲಹೆಗಾರರ ಮೂಲಕ ಹಂಚಿಕೆ.
ಫುಲ್ಆನ್ ಫ್ರೈಡೇ: ಕಾರ್ಯಕ್ರಮ, ಸೇವೆ, ಉತ್ಪನ್ನ, ಮಾಡಬೇಕಾದ ಕೆಲಸಗಳ ಬಗ್ಗೆ ರೀತು ಮಾ (ಜಾಮ್ನ ಗ್ರೂಪ್ ಅಡ್ಮಿನ್) ರಿಂದ ವೈಯಕ್ತಿಕ ಶಿಫಾರಸ್ಸು
ಸೆಕ್ಸಿ ಸಾಟರ್ಡೇ: ಮೋಜಿನ ಆಟಗಳು
ಅತೀ ಮುಖ್ಯವಾಗಿ,
ಸೈಲೆಂಟ್ ಸಂಡೇ: ಕುಟುಂಬ/ಸ್ನೇಹಿತರೊಂದಿಗೆ ಒಳ್ಳೆಯ ಸಮಯ ಕಳೆಯಲು ಮುಕ್ತ ಅವಕಾಶ
ಅಂದಹಾಗೆ ಜಾಮ್ ಏನು ಎಂದು ಆಶ್ಚರ್ಯವಾಗುತ್ತಿದೆಯಾ? ಅದು ಜರ್ನಿ ಅಬೌಟ್ ಮಾಸ್ಟ್ ಮಾಮ್ಸ್, ಅಸಂಬದ್ಧವಲ್ಲದ ವಿಶೇಷ ಮತ್ತು ಸಂಪೂರ್ಣ ತಾಯಿ ಜ್ಞಾನವನ್ನು ಬೆಂಬಲಿಸೋ ಗ್ರೂಪ್ ಆಗಿದ್ದು ಮುಂಬೈ ಮೂಲದ ತಾಯಂದಿರಿಗೆ ಹಂಚಿಕೆಯಾಗುತ್ತದೆ.
“ನಾನು ಮುಂಬೈಗೆ ಮತ್ತೆ ಬದಲಾಯಿಸಿದಾಗಿನ ಸಮಯ. ಈಗ ಹೋಗಿದ್ದು ನಗರದ ಸಂಪೂರ್ಣ ಬೇರೆಯದ್ದೇ ಭಾಗಕ್ಕೆ. ಅಲ್ಲಿ ಬೆಂಬಲದ ಗುಂಪುಗಳು ಇಲ್ಲವೆಂದು ನನಗೆ ತಿಳಿಯಿತು. ಆಗಲೇ ನಾನೊಬ್ಬ ತಾಯಿಯಾಗಿ, ತಾಯಂದಿರ ಚಿಕ್ಕ ಜಾಲವನ್ನು ಬೆಸೆದೆ. ಅಲ್ಲಿಂದ ಜಾಮ್ ಶುರುವಾಯಿತು” ಎಂದು ವಾಟ್ಸಾಪ್ ಮತ್ತು ಫೇಸ್ಬುಕ್ನಲ್ಲಿ ಕ್ರಿಯಾಶೀಲವಾಗಿರೋ ಜಾಮ್ಅನ್ನು ಹುಟ್ಟುಹಾಕಿದ ರೀತು ಗೊರೈ ಹೇಳ್ತಾರೆ.
ವಾಟ್ಸಾಪ್ನಲ್ಲಿ 25 ವ್ಯಕ್ತಿಗಳಿಂದ ಮತ್ತು ಫೇಸ್ಬುಕ್ನಲ್ಲಿ 70 ಜನರಿಂದ 2014ರ ಏಪ್ರಿಲ್ನಲ್ಲಿ ಜಾಮ್ ಶುರುವಾಯಿತು. ಇವರಲ್ಲಿ ಹೆಚ್ಚಿನವರು ಪರಸ್ಪರ ಗೊತ್ತಿರಲಿಲ್ಲ. ಆದ್ರೆ ಈಗಿದು ತಾಯಂದಿರ ಸಮಸ್ಯೆಗಳಿಗೆ ಪರಿಹಾರ ಸೂಚಿಸೋ ತಾಯಂದಿರ ಮತ್ತು ತಜ್ಞರ ಶಕ್ತಿಯುತ ಸಮುದಾಯ.
ಇಂದು ಇವರು 21 ವಾಟ್ಸಾಪ್ ಗ್ರೂಪ್ಗಳನ್ನು ಯಶಸ್ವಿಯಾಗಿ ಕ್ರಿಯೇಟ್ ಮಾಡಿಕೊಂಡಿದ್ದಾರೆ ಮತ್ತು ಮಕ್ಕಳ ವಯಸ್ಸಿಗನುಗುಣವಾಗಿ ಬೇರೆ ಬೇರೆ ವಿಭಾಗಗಳಾಗಿ ವಿಂಗಡಿಸಿಕೊಂಡಿದ್ದಾರೆ.
ಒಬ್ಬ ತಾಯಿಯಾಗಿ

2010ರಲ್ಲಿ ರೀತು ಮಗಳಿಗೆ ಜನ್ಮ ನೀಡಿದಾಗ ಗೃಹಿಣಿಯಾಗಿ ಉಳಿಯಬೇಕೆಂದು ಪ್ರಜ್ಞಾಪೂರ್ವಕ ತೀರ್ಮಾನ ಮಾಡಿದರು. “ಮಗಳ ಮೊದಲ 5 ವರ್ಷದವರೆಗೆ ನನ್ನ ಸರ್ವಸ್ವವನ್ನೂ ಆಕೆಗೆ ಧಾರೆಯೆರೆಯಬೇಕೆಂದು ನಾನು ನಿರ್ಧರಿಸಿಕೊಂಡೆ. ಆಕೆ ಪ್ಲೇಸ್ಕೂಲ್ಗೆ ಹೋದ ನಂತರವಷ್ಟೇ ನನಗೆ ಸ್ವಲ್ಪ ಸಮಯ ಸಿಕ್ಕಿದ್ದು ಮತ್ತು ಅದನ್ನು ಒಳ್ಳೆಯ ಕೆಲಸಕ್ಕೆ ಬಳಸಲು ಯೋಚಿಸಿದೆ” ಎಂದು ರಾಷ್ಟ್ರಪತಿಗಳಿಂದ ಉತ್ತಮ ಬಾಣಸಿಗ ಪ್ರಶಸ್ತಿ ಪಡೆದ ಶೆಫ್ ಸಬ್ಯಸಾಚಿ ಗೊರೈರನ್ನು ಮದುವೆಯಾಗಿರೋ ರೀತು ಹೇಳ್ತಾರೆ.
ಮುಂಬೈನಲ್ಲೇ ಹುಟ್ಟಿ ಬೆಳೆದ ರೀತು ಡಾಕ್ಟರ್ ಅಥವಾ ಎಂಜಿನಿಯರ್ ಆಯ್ಕೆಯ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಎಂಜಿನಿಯರಿಂಗ್ ಪೋಷಕರು, ಡಾಕ್ಟರ್ ಅಣ್ಣಂದಿರ ಜತೆಯಲ್ಲಿ ನೃತ್ಯದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ರೀತು, ತನ್ನ 8ನೇ ತರಗತಿಯಲ್ಲಿ ಶೈಮಕ್ ದಾವರ್ರ ತರಗತಿಗೆ ಸೇರಲು ಯಶಸ್ವಿಯಾದಳು. ಶೈಮಕ್ ಅವರು ಖ್ಯಾತ ಭರತನಾಟ್ಯ ನೃತ್ಯಗಾರ್ತಿಯಾಗಿದ್ದು ಪ್ರದರ್ಶನ ನೀಡಲು ಅವರು ದೇಶಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದರು ಮತ್ತು ಕೆಲವರಿಗೆ ಮಾತ್ರ ತರಗತಿಗಳನ್ನು ನಡೆಸುತ್ತಿದ್ದರು.
ಹಲವಾರು ವಿಷಯಗಳನ್ನು ತಿಳಿದುಕೊಂಡಿರುವಾಕೆ, ಕೆಲವೊಂದರಲ್ಲಿ ಪ್ರವೀಣೆ
ರೀತು ನೃತ್ಯವನ್ನು ಮುಂದುವರಿಸಲಾಗದು ಅನ್ನೋ ಭಯದಲ್ಲಿ ಪಿಯುಸಿಯಲ್ಲಿ ಕಾಮರ್ಸ್ ತೆಗೆದುಕೊಂಡಳು. ಆದ್ರೆ ನೃತ್ಯಾಭ್ಯಾಸಕ್ಕೆ ರೀತೂಳ ಕುಟುಂಬದವರ ಸಂಪೂರ್ಣ ಸಹಕಾರ ನೀಡಿದರು ಎಂದು ಆಕೆ ನೆನಪಿಸಿಕೊಳ್ತಾರೆ. ತನ್ನ ಸಂವಹನ ಕಲೆಯ ಬಲದಿಂದ ಆಕೆ ಕೆಲ ಕಾಲ ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸ ಮಾಡಿದಳು. ಬಿಪಿಒ ಒಂದರಲ್ಲಿ ಆಕೆ ಮೃದು ಕೌಶಲ್ಯ ಸಂವಹನ ಕಲಿಸಿಕೊಡುತ್ತಿದ್ದರು. ವಿಪ್ರೋ ಮುಂಬೈ ಕಚೇರಿಯಲ್ಲಿ ಸಮುದಾಯದ ಸ್ನೇಹಿತರ ಮೂಲಕ ತನ್ನ ಪತಿಯಾಗುವವರನ್ನು ಭೇಟಿ ಮಾಡಿದಳು. ಮದುವೆಯ ನಂತ್ರ ಆಕೆ ದೆಹಲಿಗೆ ಪ್ರಯಾಣ ಮಾಡಬೇಕಾಯಿತು. ಆದ್ದರಿಂದ ಆಕೆ ದೆಹಲಿಗೆ ವರ್ಗಾವಣೆ ತೆಗೆದುಕೊಂಡಳು. ಸುಮಾರು 8 ವರ್ಷಗಳ ಕಾಲ ಆಕೆ ಅಲ್ಲಿಯೇ ಇರಬೇಕಾಯಿತು. ಆರು ತಿಂಗಳ ಮಟ್ಟಿಗೆ ಅವರು ಆಸ್ಟ್ರೇಲಿಯಾಗೆ ಹೋಗಬೇಕಾಗಿ ಬಂದ್ರೂ ನಂತ್ರ ಮತ್ತೆ ದೆಹಲಿಗೆ ಬಂದರು. ಈ ಮಧ್ಯೆ ರೀತೂ ಅಮೆರಿಕನ್ ಎಕ್ಸ್ ಪ್ರೆಸ್ ಮತ್ತು ಜಿಇ ಕಂಪನಿಗೆ ಕೆಲಸ ಮಾಡಿದ್ದರು.
“ಮಗಳು ಹುಟ್ಟಿದ ಮೇಲೆ ತುಂಬಾ ಬದಲಾವಣೆ ಆಯಿತು. 12ಕ್ಕೂ ಹೆಚ್ಚು ತರಬೇತಿ ಕಂಪನಿಗಳಲ್ಲಿ ನಾನು ಸ್ವತಂತ್ರವಾಗಿ ಕೆಲಸ ಮಾಡ್ತಾ ಅಲ್ಲಿನವರಿಗೆ ಕಾರ್ಪೊರೇಟ್ ತರಬೇತಿ ಕಾರ್ಯಾಗಾರ, ಶಿಷ್ಟಾಚಾರ, ಸಮಯ ಮತ್ತು ತಂಡವನ್ನು ನಿರ್ವಹಣೆ ಮಾಡೋದರ ಬಗ್ಗೆ ಕಾರ್ಯಾಗಾರವನ್ನು ನಡೆಸಿಕೊಡುತ್ತಿದ್ದೆ. ಇದು ಆಯಾ ಕಂಪನಿಗಳ ಪ್ರವೇಶ ಮತ್ತು ಮಧ್ಯಮ ಆಡಳಿತ ಹಂತದ ಕೆಲಸಗಾರರಿಗೆ ನಡೆಸುತ್ತಿದ್ದ ಕಾರ್ಯಾಗಾರ” ಎನ್ನುತ್ತಾರೆ ರೀತು.

ಭಾರತಕ್ಕೆ ಇನ್ನೂ ಹೊಸದಾದ “ಮಿಸ್ಟ್ರಿ ಶಾಪಿಂಗ್”ಗೆ ಸಹ ತನ್ನ ಕೈಯಿಟ್ಟು ಪ್ರಯತ್ನಪಟ್ಟಳು. ತಾನು ಒಪ್ಪಂದ ಮಾಡಿಕೊಂಡ ತನ್ನ ಗ್ರಾಹಕರ ಮಳಿಗೆಗೆ ಸಾಮಾನ್ಯ ಕಸ್ಟಮರ್ ರೀತಿ ಹೋಗಿ ಮಳಿಗೆಯ ಸಂಪೂರ್ಣ ಬಾಹ್ಯ ಪರಿಶೋಧನೆ ಮಾಡುವುದು ಮಿಸ್ಟ್ರಿ ಶಾಪಿಂಗ್ನ ಕೆಲಸ.
ಹೃದಯದಿಂದ ಒಬ್ಬ ವಾಣಿಜ್ಯೋದ್ಯಮಿ
ರೀತು ಮುಂಬೈಗೆ ಮರಳಿದ ನಂತ್ರ ಆಕೆಗೆ ತಾನು ಕಳೆದುಹೋದ ಅನುಭವವಾಯಿತು. ನಾನು ಮಹಿಳೆಯರ ಜಾಲದಲ್ಲಿ ಉತ್ತಮಳಾಗಿದ್ದೆ. ಆದ್ದರಿಂದ ನನ್ನ ಬಹುತೇಕ ಸಮಯವನ್ನು ಜಾಮ್ಗೆ ಕೊಡೋ ನಿರ್ಧಾರ ಮಾಡಿದೆ. ನಾನು ಸರಿಯಾದ್ದನ್ನೇ ಮಾಡಿದೆ ಎಂದು ಅನ್ನಿಸಿತು. ರೀತೂರ ಮೊದಲ ಉದ್ಯಮ ‘ಆಪ್ಕಾ ಮಕಾನ್ ಹಮಾರಿ ದುಕಾನ್’ ಮನೆಯ ಅಲಕಾರಿಕ ವಸ್ತುಗಳನ್ನು ಮಾರಾಟ ಮಾಡುವ ತಾಣ. ಆದ್ರೆ ಆಕೆ ಮುಂಬೈಗೆ ಶಿಫ್ಟ್ ಆದ ಕಾರಣ ತನ್ನ ವ್ಯಾಪಾರ ಮುಂದುವರೆಸಲು ಸಾಧ್ಯವಾಗಲಿಲ್ಲ.
“ಅದು ನನ್ನ ಮೊದಲ ಉದ್ಯಮ” ಎಂದು ರೀತೂ ನೆನಪಿಸಿಕೊಳ್ತಾರೆ. ಸಧ್ಯ ವೆಬ್ಸೈಟ್ ದುರಸ್ಥಿಯಲ್ಲಿದ್ದು ತನ್ನ ಸ್ಟಾರ್ಟ್ಅಪ್ಅನ್ನು ಪುನಃ ಯಾವ ರೀತಿ ಪ್ರಾರಂಭಿಸುವುದು ಎಂದು ರೀತು ಯೋಚಿಸುತ್ತಿದ್ದಾರೆ. ಈ ಮಧ್ಯೆ ಜಾಮ್ ಮತ್ತು ಆಕೆಯ ನಾಲ್ಕಯ ವರ್ಷದ ಮಗಳು ಸಾರಾ ಆಕೆಯ ಕೈಗಳನ್ನು ಬಿಡುವಿಲ್ಲದಂತೆ ನೋಡಿಕೊಳ್ತಿದ್ದಾರೆ.