ಬೆಂಗಳೂರಿಗೆ ಕಾಲಿಡುತ್ತಿದೆ ಗರ್ಭಕೋಶ ಕಸಿ..
ಎನ್ಎಸ್ಆರ್
ಈ ಸ್ಮಾರ್ಟ್ ಯುಗದಲ್ಲಿ ಅನೇಕ ಯುವ ದಂಪತಿಗಳಿಗೆ ಕಾಡುವ ಸಮಸ್ಯೆಯೆಂದರೆ ಬಂಜೆತನ. ಮಕ್ಕಳು ಅಂದ್ರೆ ಯಾರಿಗೆ ಇಷ್ಟ ಇಲ್ಲ , ತಮ್ಮದೇ ಮಗುವಿನ ಕನಸು ಎಲ್ಲರಿಗೂ ಇರುತ್ತೆ. ಆದ್ರೆ ಗರ್ಭಕೋಶ ಸಮಸ್ಯೆ ಅನೇಕರ ಇಂತಹ ಕನಸಿಗೆ ಬ್ರೇಕ್ ಅಡ್ಡಿಯಾಗಿದೆ. ಯಿಂದ ಹಲವರು ಮಕ್ಕಳಿದೆ ಕೊರಗುತ್ತಾರೆ. ಅಂತವರು ಇನ್ಮುಂದೆ ಚಿಂತಿಸುವ ಅವಶ್ಯಕತೆಯಿಲ್ಲ, . ಗರ್ಭದಲ್ಲಿ ಏನೇ ಸಮಸ್ಯೆ ಇರಲೀ , ಗರ್ಭಕೋಶವೇ ಇಲ್ಲದೇ ಇದ್ರೂ ತಾಯಾಗಬಹುದು, ಅಂತಹವೊಂದು ಅದ್ಭುತ ತಂತ್ರಜ್ಞಾನ ಈಗ ಹಲವರ ಮಂದಹಾಸ್ಕಕೆ ಕಾರಣವಾಗಿದೆ..
.jpg?fm=png&auto=format)
ಚೆಲುವಾದ ಮುದ್ದಾದ ಮಗು ಪ್ರತಿ ದಂಪತಿಯ ಕನಸು. ಆದ್ರೆ ಆ ಕನಸು ಎಲ್ಲರಿಗೂ ನನಸಾಗುವುದಲಿಲ್ಲ. ಅದನ್ನ ನಾವು ಬಂಜೆತನ ಎನ್ನುತ್ತವೆ. ಬಂಜೆತನಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಪ್ರಮುಖ ಕಾರಣ. ಗರ್ಭಕೋಶದ ಸಮಸ್ಯೆ. ಸಾಮಾನ್ಯವಾಗಿ ಪ್ರತಿ 4 ಸಾವಿರಕ್ಕೆ ಒಬ್ಬರು ಗರ್ಭಕೋಶವೇ ಇಲ್ದೇ ಜನಿಸುತ್ತಾರೆ. ಇಂಥ ಮಹಿಳೆಯರಿಗೆಂದೇ ವಿದೇಶಗಳಲ್ಲಿ ಗರ್ಭಕೋಶ ಕಸಿ ತಂತ್ರಜ್ಞಾನದ ಮೂಲಕ ಅವರಾಸೆಯ್ನು ಪೂರೈಸಲಾಗುತ್ತದೆ. ಇದು ಈಗ ಭಾರತಕ್ಕೂ ಬರ್ತಿದೆ. ಅಂದುಕೊಂಡಂತೆ ಆದರೆ ಬೆಂಗಳೂರಿನಲ್ಲೇ ಗರ್ಭಕೋಶ ಕಸಿಯಿಂದ ಮೊದಲ ಶಿಶು ಜನಿಸಲಿದೆ. ಬೆಂಗಳೂರಿನ ವೈದ್ಯೆ ಡಾ.ಕಾಮಿನಿ ರಾವ್ ಇಂಥ ಕೆಲಸಕ್ಕೆ ಮುಂದಾಗಿದ್ದಾರೆ. ಈ ಮೂಲಕ ಹಲವು ದಂಪತಿಗಳ ಬಹು ವರ್ಷಗಳ ಕನಸನ್ನು ನನಸಾಗಿಸುವ ಹಾದಿಯಲ್ಲಿದ್ದಾರೆ..
.jpg?fm=png&auto=format)
ಹೌದು ಈ ಗರ್ಭಕೋಶವಿಲ್ಲದವರಿಗೂ ಮಕ್ಕಳಾಗುತ್ತೆ..! ಗರ್ಭಕಸಿ ಮಾಡಲು ಗರ್ಭಕೋಶವಿಲ್ಲದ ಮಹಿಳೆಯ ಅಂಡಾಶಯದಿಂದ ಅಂಡಾಣುಗಳನ್ನು ಹೊರ ತೆಗೆದು , ಭ್ರೂಣ ಸೃಷ್ಟಿಗೆ ಬಳಸಿಕೊಳ್ಳಲಾಗುತ್ತೆ . ದಾನಿಗಳಿಂದ ಗರ್ಭಕೋಶ ಪಡೆದು ಅದನ್ನ ಗರ್ಭಕೋಶ ಇಲ್ಲದ ಮಹಿಳೆಗೆ ಅಳವಡಿಕೆ ಮಾಡಲಾಗುತ್ತದೆ. ದಾನಿಗಳು ಅಂದ್ರೆ ಗರ್ಭಕೋಶ ಕಸಿ ಬಯಸೊ ಮಹಿಳೆಯ ತಾಯಿ , ಅಕ್ಕ, ತಂಗಿ ಆಗಿರಬೇಕು, ಆಗ ಮಾತ್ರ ಕಸಿ ಸಾದ್ಯ. ಇನ್ನು ಕಸಿ ಗರ್ಭಕೋಶದ ಸಹಜ ಕಾರ್ಯನಿರ್ವಹಣೆಗೆ ಆರು ತಿಂಗಳು ಬೇಕು. ಈಗಾಗಲೇ ಸೃಷ್ಟಿಸಲಾಗಿರೋ ಭ್ರೂಣವನ್ನು ಗರ್ಭಕೋಶ ಕಸಿ ಮಾಡಿಸಿಕೊಂಡ ಮಹಿಳೆಗೆ ಅಳವಡಿಸಲಾಗುತ್ತೆ. ಅಲ್ಲಿಂದ ಮಗು ಹೆರುವವರೆಗೂ ನೈಜ ಪ್ರಕ್ರಿಯೆ ಮುಂದುವರೆಯುತ್ತೆ. ಸಾಮಾನ್ಯ ಗರ್ಭವತಿ ತಾಯಿಯಂತೆ, ಇವರು ಇರ್ತಾರೆ. ಯಾವುದೇ ತೊಂದರೆಯಾಗುವುದಿಲ್ಲ. ಸಾಮಾನ್ಯವಾಗಿ ಗರ್ಭವತಿಯಾದವರನ್ನು ಹೇಗೆ ಆರೈಕೆ ಮಾಡುತ್ತಾರೆ ಅದೆ ರೀತಿ ಇಲ್ಲಿ ಆರೈಕೆಮಾಡಲಾಗುತ್ತೆ..
ಇದನ್ನು ಓದಿ: ಸಾವಿಗೆ ಸವಾಲೊಡ್ಡಿ ಗೆದ್ದ ಲಿಝಿ - ವಿಧವೆ, ಎಚ್ಐವಿ ಪೀಡಿತೆಯ ಸಾರ್ಥಕ ಬದುಕು
ಆದರೆ ಈ ರೀತಿ ಗರ್ಭ ಕಸಿ ಮಾಡಿಸಿಕೊಂಡವರು ಮಾತ್ರ ಸಾಮಾನ್ಯರಂತೆ ಸಾಮಾನ್ಯ ಡಿಲೆವರಿ ಮೂಲಕ ಮಗುವಿಗೆ ಜನ್ಮ ನೀಡುವುದಿಲ್ಲ. ಸಿಸೆರಿಯನ್ ಮೂಲಕವೇ ಮಗುವಿಗೆ ಜನ್ಮ ನೀಡಬೇಕಾಗುತ್ತದೆ. ಆದರೆ ಈ ರೀತಿ ಮಾಡುವಾಗ ಯಾವುದೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ..
.jpg?fm=png&auto=format)
ಇನ್ನೊಂದು ಸೋಜಿಗದ ಸಂಗತಿಯೆಂದರೆ ಇಡೀ ವಿಶ್ವದಲ್ಲೇ 5 ಮಕ್ಕಳು ಗರ್ಭಕೋಶ ಕಸಿಯಿಂದ ಜನಿಸಿವೆ. ಸದ್ಯ ನಗರದಲ್ಲಿ ಗರ್ಭ ಕೋಶ ಕಸಿ ಮಾಡಲು ಭಾರತೀಯ ವೈದ್ಯ ಮಂಡಳಿ ಒಪ್ಪಿಗೆ ನೀಡಿದ್ದು , ರಾಜ್ಯ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದಾರೆ. ಇನ್ನೂ ಈ ಸುದ್ದಿ ತಿಳಿಯುತ್ತಲೇ ಸಿಂಗಪುರ, ಆಂಧ್ರ , ತಮಿಳುನಾಡು ಸೇರಿದಂತೆ ಹಲವಡೆಯಿಂದ 15ಕ್ಕೂ ಹೆಚ್ಚು ಮಹಿಳೆಯರು ಗರ್ಭಕೋಶ ಕಸಿ ಶಸ್ರ್ರಚಿಕಿತ್ಸೆಗೆ ಆಸಕ್ತಿ ತೋರಿದ್ದಾರೆ. ಈ ವಿಷಯ ಹೆಚ್ಚು ಪ್ರಚಾರವಾದಲ್ಲಿ ಇನ್ನೂ ಹೆಚ್ಚು ಮಹಿಳೆಯರು ಆಸಕ್ತಿ ತೋರುವುದು ಗ್ಯಾರಂಟಿ. ಎಲ್ಲವೂ ಅಂದುಕೊಂಡಂತೆ ನಡೆದರೆ ಬೆಂಗಳೂರಿನಲ್ಲೇ ಮೇ ತಿಂಗಳಲ್ಲಿ ಗರ್ಭಕೋಶ ಕಸಿಯ ಪ್ರಕ್ರಿಯೆ ಶುರುವಾಗಲಿದೆ. 2017ರಲ್ಲಿ ದೇಶದ ಪ್ರಥಮ ಗರ್ಭಕೋಶ ಕಸಿಯಿಂದ ಮಗು ಜನಿಸಲಿದೆ..
1. 10 ಸಾವಿರ ಡ್ರೆಸ್ ಡಿಸೈನ್ ಹೊಂದಿರುವ ಮಹಿಳೆಯರ ಫೆವರೆಟ್ ವೆಬ್ಸೈಟ್ banglewale