Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಕಡಿಮೆ ವೆಚ್ಚದ ಲ್ಯಾರಿಂಗೋಸ್ಕೋಪ್ ಆವಿಷ್ಕರಿಸಿದ ಬೆಂಗಳೂರಿನ ಡಾಕ್ಟರ್‌ ಕುಮಾರೇಶ್

ಲ್ಯಾರಿಂಗೋಸ್ಕೋಪ್ ಒಂದು ವೈದ್ಯಕೀಯ ಉಪಕರಣ. ಇದನ್ನು ಆಪರೇಶನ್‌ ಥಿಯಟೆರ್‌, ಐಸಿಯು ಹಾಗೂ ಆಂಬ್ಯೂಲೆನ್ಸ್‌ನಂತಹ ತುರ್ತು ವಿಭಾಗಗಳಲ್ಲಿ ಬಳಸಲಾಗುತ್ತದೆ.

ಕಡಿಮೆ ವೆಚ್ಚದ ಲ್ಯಾರಿಂಗೋಸ್ಕೋಪ್ ಆವಿಷ್ಕರಿಸಿದ ಬೆಂಗಳೂರಿನ ಡಾಕ್ಟರ್‌ ಕುಮಾರೇಶ್

Saturday January 25, 2020 , 2 min Read

ಭಾರತದಂತಹ ಬೃಹತ್‌ ಜನಸಂಖ್ಯೆಯ ರಾಷ್ಟ್ರದಲ್ಲಿ ವೈದ್ಯಕೀಯ ಚಿಕಿತ್ಸೆಯು ಇನ್ನೂ ಸಹ ಸಮಾಜದ ಒಂದು ವರ್ಗಕ್ಕೆ ಭರಿಸಲಾಗದ ವಿಷಯವೇ ಆಗಿದೆ. ಚಿಕಿತ್ಸಾ ವೆಚ್ಚವು ತುಟ್ಟಿಯೆನಿಸುವುದು ಅದರಲ್ಲಿ ಬಳಸುವ ಉಪಕರಣಗಳಿಂದ. ಲ್ಯಾರಿಂಗೋಸ್ಕೋಪ್ ಉಪಕರಣವು ಗಂಟಲಿನ ಮೂಲಕ ದೇಹದೊಳಕ್ಕೆ ಪ್ರವೇಶಿಸಬಲ್ಲದು. ಪೈಪ್‌ನ ಆಕರದ ಈ ಉಪಕರಣವು ಒಂದು ಕ್ಯಾಮೆರಾವನ್ನು ಹೊಂದಿರುತ್ತದೆ. ಇದು ನಮ್ಮ ಧ್ವನಿ ಪೆಟ್ಟಿಗೆಯನ್ನು ನೋಡಲು ಮತ್ತು ರೋಗಿಯು ಸ್ವಂತವಾಗಿ ಉಸಿರಾಡಲು ಸಾಧ್ಯವಾಗದಿದ್ದಾಗ ಉಸಿರಾಟವನ್ನು ಶಕ್ತಗೊಳಿಸುವ ಟ್ಯೂಬ್ ಅನ್ನು ಸೇರಿಸಲು ಬಳಸುವ ನಿರ್ಣಾಯಕ ಸಾಧನವಾಗಿದೆ. ಅನೇಕ ಆಸ್ಪತ್ರೆಗಳು ಕೇವಲ ಇಂತಹ ಒಂದು ಸಾಧನವನ್ನು ಹೊಂದಿರುತ್ತವೆ, ಇದನ್ನು ಆಪರೇಷನ್ ಥಿಯೇಟರ್‌ನಲ್ಲಿ ಬಳಸಲಾಗುತ್ತದೆ. ಸಣ್ಣ ಆಸ್ಪತ್ರೆಗಳು ಒಂದನ್ನೂ ಸಹ ಹೊಂದಿರುವುದಿಲ್ಲ, ಇದರ ಬೆಲೆ ಸುಮಾರು 5 ಲಕ್ಷ ರೂ. ಆಪರೇಷನ್ ಥಿಯೇಟರ್‌ನಲ್ಲಿ ಕೇವಲ ಒಂದು ಲಾರಿಂಗೋಸ್ಕೋಪ್ ಇರುತ್ತದೆ ಹಾಗೂ ಅದನ್ನು ಅಗತ್ಯವಿರುವ ಆಸ್ಪತ್ರೆಯ ಇತರ ಪ್ರದೇಶಗಳಿಗೆ ಸ್ಥಳಾಂತರಿಸಲಾಗುವುದಿಲ್ಲ.


ಆದರೆ ಬೆಂಗಳೂರಿನ ಈಎನ್‌ಟಿ ಶಸ್ತ್ರಚಿಕಿತ್ಸಕ ಕುಮಾರೇಶ್‌ ಎರಡು ತಮ್ಮ ಅನುಭವವನ್ನು ಬಳಸಿಕೊಂಡು ಅವರು ದೇಶದ ಮೂಲೆ ಮೂಲೆಯನ್ನು ತಲುಪಲು ಕಡಿಮೆ ಬೆಲೆಯ ವೈದ್ಯಕೀಯ ಸಾಧನಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ.


ಅವರು ಐಒಟಿ-ಶಕ್ತಗೊಂಡ ವೀಡಿಯೊ ಲಾರಿಂಗೋಸ್ಕೋಪ್ ಅನ್ನು ವಿನ್ಯಾಸಗೊಳಿಸಿದ್ದು, ಇದರ ಬೆಲೆ ಸುಮಾರು 22,000ರೂ. ಅದೇ ಸಾಂಪ್ರದಾಯಿಕ ಉಪಕರಣದ ಬೆಲೆ ಸುಮಾರು 5 ಲಕ್ಷ ರೂ, ವರದಿ ಫ್ಯೂಶನ್.


ಕುಮಾರೇಶ್‌ ತಯಾರಿಸಿರುವುದು ವೀಡಿಯೊ ಲಾರಿಂಗೋಸ್ಕೋಪ್ ಆಗಿದ್ದು ಅದು ಆಂಡ್ರಾಯ್ಡ್ ಮೊಬೈಲ್ ಫೋನ್ ಅನ್ನು ಬೆಳಕಿನ ಸಹಾಯಕ್ಕೆ ಮತ್ತು ಕ್ಯಾಮೆರಾದಂತೆ ಬಳಸುತ್ತದೆ. ಇದು ಅತ್ಯಂತ ಚಿಕ್ಕ ಮಾದರಿಯಾಗಿದ್ದು, ಇದನ್ನು ವೈದ್ಯರು ತಮ್ಮ ಜೇಬಿನಲ್ಲಿ ಸಾಗಿಸಬಹುದು. ಕಾರ್ಯವಿಧಾನದ ಅಗತ್ಯಗಳನ್ನು ಆಧರಿಸಿ ಲಾರಿಂಗೋಸ್ಕೋಪ್‌ನಲ್ಲಿರುವ ಕ್ಯಾಮೆರಾವನ್ನು ಬದಲಾಯಿಸಬಹುದು. ಈ ಲಾರಿಂಗೋಸ್ಕೋಪ್ ಒಂದು ವಿಶಿಷ್ಟ ಗುಣಲಕ್ಷಣವನ್ನು ಹೊಂದಿದೆ, ಅದು ಫೋನ್‌ನಲ್ಲಿ ಸಂಪೂರ್ಣ ಕಾರ್ಯವಿಧಾನವನ್ನು ದಾಖಲಿಸುತ್ತದೆ. ಇದನ್ನು ಇಮೇಲ್ ಮೂಲಕ ಅಥವಾ ಅಗತ್ಯವಿರುವವರಿಗೆ ಸಂದೇಶವಾಗಿ ಕಳುಹಿಸಬಹುದು. ಈ ಸೌಲಭ್ಯವು ತುರ್ತು ಸಂದರ್ಭಗಳಲ್ಲಿ ತಜ್ಞರಿಂದ ದೂರದ ಸ್ಥಳದಿಂದ ನೈಜ ಸಮಯದ ಮಾರ್ಗದರ್ಶನ ಪಡೆಯಲು ಸಾಧ್ಯವಾಗಿಸುತ್ತದೆ. ಆಂಬ್ಯುಲೆನ್ಸ್‌ನಲ್ಲಿರುವ ರೋಗಿಯು ಆಸ್ಪತ್ರೆಗೆ ತಲುಪುವ ಮೊದಲೇ ಸಹಾಯ ಪಡೆಯುವುದರಿಂದ ಇದು ರೋಗಿಯ ಜೀವವನ್ನು ಉಳಿಸುತ್ತದೆ, ವರದಿ ದಿ ನ್ಯೂಸ್‌ ಮಿನಿಟ್.


ಚಿತ್ರಕೃಪೆ: ದಿ ನ್ಯೂಸ್‌ ಮಿನಿಟ್


ಯುವಿ ಬಾಟ್‌

ಆರೋಗ್ಯ ರಕ್ಷಣೆಯ ಒಂದು ನಿರ್ಣಾಯಕ ಅಂಶವೆಂದರೆ ನೈರ್ಮಲ್ಯ. ಯುವಿ ಬಾಟ್ ಸೋಂಕುನಿವಾರಕ ಸಾಧನವಾಗಿದ್ದು, ಇದನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಕಡ್ಡಾಯಗೊಳಿಸಲಾಗಿದೆ. ಆಪರೇಷನ್ ಥಿಯೇಟರ್‌ಗಳು, ಶಸ್ತ್ರಚಿಕಿತ್ಸೆಯ ನಂತರದ ಅವಧಿಗಳು, ಐಸಿಯುಗಳು, ಲ್ಯಾಬ್‌ಗಳು ಮತ್ತು ವಾರ್ಡ್‌ಗಳಲ್ಲಿ ಇದನ್ನು ಬಳಸಲಾಗುತ್ತದೆ. ಪ್ರಾಸಂಗಿಕವಾಗಿ, ಇದನ್ನು ಪಶ್ಚಿಮದಲ್ಲಿ ಹೋಟೆಲ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿಯೂ ಬಳಸಲಾಗುತ್ತಿದೆ. ಆಮದು ಸುಂಕ ಮತ್ತು ತೆರಿಗೆ ಸೇರಿದಂತೆ ಹೆಚ್ಚಿನ ವೆಚ್ಚದಿಂದಾಗಿ ಇದು ಭಾರತದಲ್ಲಿ ಬಳಕೆಯಲ್ಲಿಲ್ಲ. ಅಗ್ಗದ ಬೆಲೆಗೆ ಸುಮಾರು 50 ಲಕ್ಷ ರೂ, ಸಿಕ್ಕರೆ ಟಾಪ್ ಎಂಡ್ ಒಂದು ಕೋಟಿ ರೂ. ವೆಚ್ಚದ್ದಾಗಿದೆ.


ಡಾ.ಕೃಷ್ಣಮೂರ್ತಿ ಮಾರುಕಟ್ಟೆಯಲ್ಲಿರುವ ಯುವಿ ಬಾಟ್‌ಗಿಂತ ಶಕ್ತಿಯುತವಾದ ಮತ್ತು ಬರೀ 7-10 ಲಕ್ಷ ರೂಪಾಯಿ ಬೆಲೆಬಾಳುವ ಯುವಿ ಬಾಟ್‌ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಅದರ ಸಾಗಣೆಯು ಸುಲಭವಾಗಿರುವುದರಿಂದ ಒಂದೇ ಕಟ್ಟಡದ ಹಲವಾರು ಕೋಣೆಗಳಲ್ಲಿ ಅದನ್ನು ಬಳಸಬಹುದಾಗಿದೆ.


ಡಾ.ಕುಮಾರೇಶ್‌ (ಚಿತ್ರಕೃಪೆ : ಫ್ಯೂಶನ್)


ದಿ ನ್ಯೂಸ್‌ ಮಿನಿಟ್‌ ಜೊತೆ ಮಾತನಾಡುತ್ತಾ ಡಾ.ಕೃಷ್ಣಮೂರ್ತಿ,


"ರೋಗಿಯನ್ನು ಡಿಸ್ಚಾರ್ಜ್ ಮಾಡಿದ ನಂತರ ರಿಮೋಟ್ ಕಂಟ್ರೋಲ್, ಡೋರ್ ಬಟನ್‌ಗಳು, ಹಳಿಗಳು ಅಥವಾ ಸೀಲಿಂಗ್ ಅನ್ನು ಕೈಯಾರೆ ಸ್ವಚ್ಚಗೊಳಿಸಲಾಗುವುದಿಲ್ಲ. ಜನರು ಸೋಂಕಿಗೆ ಒಳಗಾಗಬಹುದು. ಅಸ್ತಿತ್ವದಲ್ಲಿರುವ ಅಂತರರಾಷ್ಟ್ರೀಯ ಅಧ್ಯಯನಗಳಿಂದ ಇದು ಸಾಬೀತಾಗಿದೆ. ಈಗ, ಈ ಕೈಗೆಟುಕುವ ಯುವಿ ಬಾಟ್ ಆಸ್ಪತ್ರೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸೋಂಕುಗಳನ್ನು ತಡೆಯುತ್ತದೆ,” ಎಂದರು.

ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.