Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ರತನ್ ಟಾಟಾ ಅವರ ಸ್ಪೂರ್ತಿದಾಯಕ ನುಡಿಗಳು - ಇದು 83 ನೇ ಹುಟ್ಟು ಹಬ್ಬದ ವಿಶೇಷ

ರತನ್ ಟಾಟಾ 83ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ, ಈ ಹೊತ್ತಿನಲ್ಲಿ‌ ಅವರ ಕೆಲವು ಸ್ಪೂರ್ತಿದಾಯಕ ಮಾತುಗಳು ಇಲ್ಲಿವೆ.

ರತನ್ ಟಾಟಾ ಅವರ ಸ್ಪೂರ್ತಿದಾಯಕ ನುಡಿಗಳು - ಇದು 83 ನೇ ಹುಟ್ಟು ಹಬ್ಬದ ವಿಶೇಷ

Monday December 28, 2020 , 2 min Read

ರತನ್‌ ಟಾಟಾ ಭಾರತ ದೇಶ ಕಂಡ ಪ್ರಭಾವಿ ಉದ್ಯಮಕಾರರಲ್ಲಿ ಒಬ್ಬರು. 1937ರಲ್ಲಿ ಜನಸೇತ್‌ಜಿ ಟಾಟಾ ಅವರ ಮೊಮ್ಮಗನಾಗಿ ಹುಟ್ಟಿದ ಇವರು ನ್ಯೂ ಯಾರ್ಕ್‌ನ ಕಾರ್ನೆಲ್‌ ಯುನಿವರ್ಸಿಟಿಯಲ್ಲಿ ಶಿಕ್ಷಣ ಪಡೆದು 1961ರಲ್ಲಿ ಭಾರತಕ್ಕೆ ಮರಳಿ ಟಾಟಾ ಗ್ರೂಪ್‌ನ ಅಧ್ಯಕ್ಷರಾದರು.


ಪದ್ಮಭೂಶನ(2000) ಮತ್ತು ಪದ್ಮವಿಭೂಶನ ಪ್ರಶಸ್ತಿ ಪಡೆದಿದರುವ ಟಾಟಾ 1961ರಲ್ಲಿ ಟಾಟಾ ಸ್ಟೀಲ್‌ನಲ್ಲಿ ಬ್ಲಾಸ್ಟ್‌ ಫರ್ನೆಸ್‌ ಮತ್ತು ಸುಣ್ಣದ ಕಲ್ಲನ್ನು ನಿರ್ವಹಿಸುವ ಕೆಲಸ ಮಾಡತೊಡಗಿದರು.


21ನೇ ವಯಸ್ಸಿನಲ್ಲಿಯೆ ಟಾಟಾ ಗ್ರೂಪ್‌ನ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಇವರು ನಂತರದ ಎರಡೂವರೆ ದಶಕದಲ್ಲಿ ಸಂಸ್ಥೆಯ ಲಾಭವನ್ನು 50 ಪಟ್ಟು ಹೆಚ್ಚಿಸಿದರು.


ರತನ್‌ ಟಾಟಾ ಅವರ 83ನೇ ಜನ್ಮದಿನದಂದು ಅವರ ಕೆಲವು ಮಾತುಗಳನ್ನು ಇಲ್ಲಿ ನೀಡಲಾಗಿದೆ.


“ನಾವು ಜೀವನದಲ್ಲಿ ಮುಂದೆ ಹೋಗಲು ಮೇಲೆ ಕೆಳಗೆ, ಸೋಲು ಗೆಲುವು ಇರಲೇಬೇಕು, ಏಕೆಂದರೆ ಇಸಿಜಿಯಲ್ಲಿ ನೇರವಾದ ಲೈನ್‌ ಮೂಡಿದರೆ ನಾವು ಬದುಕಿಲ್ಲವೆಂದೆ ಅರ್ಥ.”


“ಜನ ನಿಮ್ಮ ಮೇಲೆ ಕಲ್ಲು ಎಸೆದರೆ ಅವುಗಳಿಂದ ಸ್ಮಾರಕ ಕಟ್ಟಿ.”


“ನಮ್ಮೆಲ್ಲರಲ್ಲೂ ಸಮಾನ ಪ್ರತಿಭೆಯಿಲ್ಲ. ಆದರೆ ಅದನ್ನು ಬೆಳೆಸಿಕೊಳ್ಳಲು ಸಮಾನ ಅವಕಾಶವಿದೆ.”


"ನಾನು ಸಮಾನ ಅವಕಾಶವಿರುವ ಭಾರತ ದೇಶದ ಕನಸು ಕಾಣುತ್ತೇನೆ - ಅಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ಅಸಮಾನತೆಯನ್ನು ನಾವು ಕಿತ್ತು ಹಾಕಬೇಕು, ಎಲ್ಲಕ್ಕಿಂತ ಮುಖ್ಯವಾಗಿ, ಯಾರಿಗಾದರೂ ಏನಾದರೂ ಮಾಡಬೇಕೆನ್ನುವ ಇಚ್ಛೆ ಇದ್ದರೆ, ಆ ಸಹನೆ ಇದ್ದರೆ ಅಂತಹವರಿಗೆ ಯಶಸ್ವಿಯಾಗಲು ಅವಕಾಶ ನೀಡುವ ದೇಶವಾಗಬೇಕು.“

“ನಮ್ಮಿಂದ ಏನಾದರೂ ಬದಲಾವಣೆ ಆಗಿದೆಯೆ? ಕೇವಲ ಹಣದ ದೃಷ್ಟಿಯಿಂದಲ್ಲದೆ ನಮ್ಮ ಹೊಸತನ, ಕ್ರಿಯಾತ್ಮಕತೆಯಿಂದ ದೇಶಕ್ಕೆ ಏನಾದರೂ ಉಪಯೋಗವಾಗಿದೆಯೆ ಎಂದು ನಮಗೆ ನಾವೇ ಕೇಳಿಕೊಳ್ಳಬೇಕು. ನಾವು ವಿನಯದಿಂದರಬೇಕು ಅದರ ಜತೆ ಜತೆಗೆ ಅವಕಾಶಗಳನ್ನು ಹುಡುಕುತ್ತಿರಬೇಕು.”


“ನಾನು ಎಲ್ಲರನ್ನೂ ಸಮಾನವಾಗಿ ಕಾಣಲು ಪ್ರಯತ್ನಿಸಿದ್ದೇನೆ. ಅದು ಬೀದಿಯಲ್ಲಿರುವ ಬಡ ವ್ಯಕ್ತಿಯಾಗಿರಲಿ ಅಥವಾ ಮಿಲಿಯನೇರ್ ಅಥವಾ ಬಿಲಿಯನೇರ್ ಆಗಿರಲಿ ಅಥವಾ ಪೇಪರ್‌ ಮಾರುವ ಮಗುವೆ ಆಗಿರಲಿ, ನಾನು ಅವರೆಲ್ಲರನ್ನೂ ಒಂದೆ ರೀತಿ ಕಂಡು ಮಾತನಾಡುತ್ತೇನೆ. ನಾನಿದನ್ನು ಜಂಭಕ್ಕಾಗಿ ಮಾಡುವುದಿಲ್ಲ, ಆದರೆ ಪ್ರತಿಯೊಬ್ಬ ಮನುಷ್ಯನಿಗೂ ಬೆಲೆಯಿದೆ ಎಂದು ತಿಳಿದು ಮಾಡುತ್ತೇನೆ.”


“ಸರಿಯಾದದ್ದನ್ನು ಮಾಡುವುದು ತುಂಬಾ ಕಷ್ಟದ ಕೆಲಸವಾಗಿರಬಹುದು, ಆದರೆ ಅದೆ ಉತ್ತಮವಾದದ್ದು.”


“ನಾವೀಗ ನಮಗೆ ಅಪರಿಚಿತವಾದ ಅಖಾಡದಲ್ಲಿದ್ದೇವೆ. ಇಂಥಾ ಸಮಯದಲ್ಲಿ ನಮ್ಮ ದೇಹ ಉತ್ತರ ಹುಡುಕಲು ಪ್ರಾರಂಭಿಸುತ್ತ ಪ್ರತಿಕ್ರಿಯಿಸುತ್ತದೆ. ತುಂಬಾ ಅದ್ಭುತವಾದ ಪರಿಹಾರಗಳು ಕಷ್ಟ ಕಾಲದಲ್ಲೆ ಸಿಕ್ಕಿದ್ದು.”


“ನಡೆಯುವ ದಾರಿಯಲ್ಲಿ ಸವಾಲುಗಳಿದ್ದರೆ, ಹೊಸದಾದ ಪರಿಹಾರಗಳು ಹುಟ್ಟಿಕೊಳ್ಳುತ್ತವೆ. ಸವಾಲುಗಳಿಲ್ಲದೆ ಹೋದರೆ ಎಲ್ಲವೂ ಒಂದೆತರ ಎಣಿಸತೊಡಗುತ್ತದೆ.”