Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ನೊಂದ ಮಹಿಳೆಯರಿಗೆ ಸಹಾಯ ಹಸ್ತ...!

ವಿಸ್ಮಯ

ನೊಂದ ಮಹಿಳೆಯರಿಗೆ ಸಹಾಯ ಹಸ್ತ...!

Thursday January 28, 2016 , 2 min Read

ನಿಮಗೆ ಸ್ವಂತ ದುಡಿಮೆ ಮಾಡಬೇಕು ಅಂತ ಆಸೆ ಇದ್ದೀಯಾ? ಹೆಚ್ಚು ಹೊರಗೆ ಹೋಗದೇ ಮನೆಯಲ್ಲೇ ಕೂತ್ಕೊಂಡು ಹಣ ಸಂಪಾದನೆ ಮಾಡಬೇಕು ಅನ್ನೋ ಪ್ಲಾನ್ ಇದೆಯಾ..? ಯಾರ ಹಂಗಿಲ್ಲದೇ ಸ್ವಾಲಂಬಿ ಆಗಿ ದುಡಿಮೆ ಮಾಡಬೇಕು ಅನ್ನೋವರಿಗೆ ಇಲ್ಲಿ ಅವಕಾಶ ಇದೆ.. ದುರ್ಬಲ ಮಹಿಳೆಯರಿಗೆ, ನೊಂದ ಒಂಟಿ ಮಹಿಳೆಯರಿಗೆ ಕೆಲಸ ಕೊಡತ್ತಾರೆ.

image


ತಾವು ಪಟ್ಟ ಕಷ್ಟ ಬೇರೆ ಯಾವ ಹೆಣ್ಣು ಮಕ್ಕಳು ಪಡಬಾರದು ಎಂಬ ಕಾರಣಕ್ಕೆ ಹೊಸ ಉದ್ದಿಮೆಯನ್ನೇ ಆರಂಭಿಸಿದ್ರು. ಅವರೇ ಶ್ವೇತಾಘಂಟೋಜಿ. ಮೂಲತಃ ಕಲಬುರ್ಗಿಯವರು. ಉತ್ತರ ಕರ್ನಾಟಕದ ಸುಪ್ರಸಿದ್ಧ ಚಟ್ನಿ ಮತ್ತು ಮೆಣಸಿನ ಪುಡಿಗಳನ್ನು ತಯಾರಿ ಮಾಡುತ್ತಾರೆ. ಮೆಣಸು ವ್ಯಾಪಾರ ಮಾಡುವ ಇವರು ಬಡ ಜನರಿಗಾಗಿ, ನೊಂದ ಒಂಟಿ ಮಹಿಳೆಯರಿಗಾಗಿ ಘಂಟೋಜಿ ಗೃಹ ಉದ್ಯೋಗವನ್ನ ಆರಂಭಿಸಿದ್ರು. ಕಷ್ಟದಲ್ಲಿ ಇರುವ ಮಹಿಳೆಯರಿಗಾಗಿ, ಮನೆಯಲ್ಲಿ ಆರ್ಥಿಕ ಕಷ್ಟವಿದ್ದರೆ ಅಂತಹವರಿಗಾಗಿ ಈ ಹೊಸ ಕೆಲಸಕ್ಕೆ ಕೈ ಹಾಕಿದ್ದಾರು.

ಇದನ್ನು ಓದಿ

ಎದೆಹಾಲು ಸಂಗ್ರಹಿಸುವ ವಿಶಿಷ್ಟ ಬ್ಯಾಂಕ್​ - 1900 ಕಂದಮ್ಮಗಳಿಗೆ ಜೀವದಾನ

ಮನೆಯಿಂದ ಬೀದಿ ಪಾಲಾದ ಮಹಿಳೆಯರಿಗೆ, ಒಂಟಿ ಮಹಿಳೆಯರಿಗೆ, ದೌರ್ಜನ್ಯಕ್ಕೆ ಒಳಗಾದ ನೊಂದ ಮಹಿಳೆಯರಿಗೆ ಕೆಲಸ ಕೊಡುವ ಕಾರಣ ಈ ಹೊಸ ಯೋಜನೆಗೆ ಕೈ ಹಾಕಿದ್ದಾರು. ತಾವೇ ತಯಾರಿಸಿದ ಶೆಂಗಾಪುಡಿ, ಖಾರದ ಪುಡಿ, ಬ್ಯಾಡಗಿ ಪುಡಿ,ಹೀಗೆ ವಿವಿಧ ಉತ್ತರ ಭಾಗದ ಸುಪ್ರಸಿದ್ದ ಪುಡಿಗಳನ್ನು ರೆಡಿ ಮಾಡಿ, ಅದನ್ನು ಬೇರೆಡೆ ವ್ಯಾಪಾರಕ್ಕೆ ಕಳುಹಿಸಿತ್ತಾರೆ. ಯಾರಿಗಾದ್ರೂ ಉದ್ಯೋಗ ಬೇಕು ಅಂದ್ರೆ ಶ್ವೇತಾ ಅವರು, ಅವರು ಇರುವಲ್ಲಿಗೆ ಪುಡಿಗಳನ್ನು ಕಳುಹಿಸಿಕೊಡ್ತಾರೆ. ಅದರಿಂದ ಅವ್ರಿಗೆ ಸಹಾಯವಾಗಿ ಉತ್ತಮ ಲಾಭವನ್ನು ಗಳಿಸುತ್ತಿದ್ದಾರೆ.

image


ಈಗಾಗಲೇ ಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ನೊಂದ ಮಹಿಳೆಯರಿಗೆ ಉದ್ಯೋಗವನ್ನು ನೀಡಿದ್ದಾರೆ. ಇನ್ನು ಯಾವ ರೀತಿಯಲ್ಲಿ ನೊಂದ ಮಹಿಳೆಯರಿಗೆ ಸಹಾಯ ಮಾಡ್ತಾರೆ ಅನ್ನೋ ಪ್ರಶ್ನೆ ಕಾಡದೇ ಇರೋಲ್ಲ ಬಿಡಿ. ಅದಕ್ಕೆ ಇವರು ಮಾಡೋದು ಯಾವುದಾದ್ರೂ ಮೇಳ ಇದ್ದಾಗ ಅಲ್ಲಿ ಇವರು ಭಾಗವಹಿಸುತ್ತಾರೆ. ಬೆಂಗಳೂರು, ಮೈಸೂರು ಎಲ್ಲೇ ಮೇಳಗಳು ನಡೆದ್ರು ಅಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ.

ವ್ಯಾಪಾರಕ್ಕೆ ಇವರು ಕೆಎಸ್‍ಆರ್‍ಟಿಸಿ ಬಸ್‍ನ್ನೇ ನೆಚ್ಚಿಕೊಂಡಿದ್ದಾರೆ. ಯಾರು ಕೆಲಸ ಮಾಡಲು ಇಷ್ಟ ಪಡುತ್ತಾರೋ ಅವ್ರು ಇರುವ ಜಾಗಕ್ಕೆ ಬಸ್ ಮೂಲಕ ಕಳುಹಿಸಿಕೊಡುತ್ತಾರೆ. ಮನೆಯಲ್ಲಿ ತಯಾರಿಸುವ ಈ ಉತ್ಪನ್ನಗಳಿಗೆ ಎಲಿಲ್ಲದ ಬೇಡಿಕೆ ಇದೆ. ಮದುವೆ ಸಮಾರಂಭಕ್ಕೂ ಅಡುಗೆ ಪದಾರ್ಥಗಳನ್ನು ಕಳುಹಿಸಿಕೊಡುತ್ತಾರೆ. ಇವರು ಒಮ್ಮೆ ಮೇಳದಲ್ಲಿ ಭಾಗವಹಿಸಿದ್ರೆ ಬರೋಬ್ಬರಿ 10 ರಿಂದ 20 ಲಕ್ಷ ಆದಾಯವನ್ನು ಗಳಿಸುತ್ತಾರೆ.

ಇವರ ಬಳಿ ಕೆಲಸ ಮಾಡುವವರು ಏನ್ ಹೇಳ್ತಾರೆ..?

ಇವರ ಸಹಾಯದೊಂದಿಗೆ ಈಗಾಗಲೇ ಸಾಕಷ್ಟು ಮಹಿಳೆಯರು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಅದರಲ್ಲಿ ಬಿಜಾಪುರದಲ್ಲಿ ವಾಸವಿರೋ ಮಲ್ಲಮ್ಮ ಹೇಳೋದು ಹೀಗೆ, ಮನೆಯಲ್ಲಿ ನನ್ನ ಗಂಡ ಕುಡಿತದ ಚಟಕ್ಕೆ ಸೆರೆಯಾಗಿದ್ದ, ಮಕ್ಕಳನ್ನ ಓದಿಸಲಿಕ್ಕೆ ಕಾಸು ಇರಲಿಲ್ಲ. ನಮಗೆ ಯಾವ ಉದ್ಯೋಗವು ಹೆಚ್ಚು ತಿಳಿದಿರಲಿಲ್ಲ, ಮನೆಯ ಸಂಸಾರ ನೌಕೆ ತೂಗಲು ಕಷ್ಟ ಪಡುತ್ತಿದ್ದ ವೇಳೆ, ಹೀಗೆ ಅಡುಗೆ ಉತ್ಪನ್ನವನ್ನು ಮಾರಲು ಪುಡಿಗಳನ್ನು ನೀಡತ್ತಾರೆ ಎಂದು ತಿಳಿಯಿತು. ಆನಂತ್ರ ಅವರನ್ನು ಸಂಪರ್ಕಿಸಿದೆ. ಈಗ ನಾನೇ ಮನೆಯ ಸುತ್ತಮುತ್ತ ಜನರಿಗೆ ಪುಡಿಗಳನ್ನು ಮಾರಾಟ ಮಾಡಿ ಹಣ ಸಂಪಾನೆಯನ್ನು ಮಾಡುತ್ತಿದ್ದೀನಿ ಅಂತಾರೆ ಮಲ್ಲಮ್ಮ.

ಚಿನ್ನಿ ಸ್ಪೈಸೆಸ್ ಎಂಬ ಹೆಸರಿನಲ್ಲಿ ಘಂಟೋಜಿ ಗೃಹ ಉದ್ಯೋಗ ಎಂಬ ಅಡಿ ಬರಹ ನೀಡಿ. ಬಡ, ನೊಂದ ಮಹಿಳೆಯರಿಗೆ ಸಹಾಯವನ್ನು ಮಾಡುತ್ತಿದ್ದಾರೆ. ತಾವು ಉತ್ತಮ ಆದಾಯ ಗಳಿಸಿ, ಮತ್ತೊಬ್ಬರಿಗೂ ದಾರಿ ದೀಪವಾಗಿ, ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ.

ಇದನ್ನು

ಕೇವಲ 10 ಸಾವಿರ ರೂ.ಗೆ ಎಸಿ, ವಿದ್ಯುತ್​ ಬಳಕೆ 10 ಪಟ್ಟು ಕಮ್ಮಿ - ಇದು ರಾಜಸ್ತಾನದ ಯುವಕನ ಸಾಧನೆ

ಕೇವಲ 10 ಸಾವಿರ ರೂ.ಗೆ ಎಸಿ, ವಿದ್ಯುತ್​ ಬಳಕೆ 10 ಪಟ್ಟು ಕಮ್ಮಿ - ಇದು ರಾಜಸ್ತಾನದ ಯುವಕನ ಸಾಧನೆ

ಕಷ್ಟದ ಜೊತೆ ಗುದ್ದಾಡಿ ಗೆದ್ದ ಛಲಗಾರ – ಸಿಎ ಪಾಸ್ ಮಾಡಿ ಚಾರ್ಟಡ್ ಅಕೌಂಟೆಂಟ್ ಆದ ಚಾಯ್ ವಾಲಾ