ಹಳೆ ವಾಹನಗಳಿಗೆ ಹೊಸ ಲುಕ್ ನೀಡುತ್ತೆ ಈ ಸಂಸ್ಥೆ..!
ವಿಸ್ಮಯ
ಸಿಲಿಕಾನ್ ಸಿಟಿಯಲ್ಲಿ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಹೊಸ ಹೊಸ ಗಾಡಿಗಳು ರಸ್ತೆಗೆ ಇಳಿತಾನೇ ಇರುತ್ತೆ.. ಇದರಿಂದ ಮಾಯುಮಾಲಿನ್ಯ, ಶಬ್ಧಮಾಲಿನ್ಯ, ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿರೋದ್ರ ಜೊತೆಗೆ ಗುಜುರಿಗೆ ಸೇರುತ್ತಿರು ಹಳೆ ವಾಹನಗಳ ಸಂಖ್ಯೆಯು ಹೆಚ್ಚುತ್ತಿದೆ.. ಈ ಸಮಸ್ಯೆಗೆ ಮುಕ್ತಿ ನೀಡೋ ಬಗ್ಗೆ ಯಾರು ಕೂಡ ಯೋಚನೆ ಮಾಡಿರಲ್ಲಿಲ್ಲ... ಆದ್ರೆ ಇಲ್ಲೊಂದಷ್ಟು ಮಂದಿ ಈ ಹಳೆ ವಾಹನಗಳಿಗೆ ಹೊಸ ರೂಪ ಕೊಟ್ಟು, ಹೊಸ ವಾಹನಗಳಿಗಿಂತ ಸೂಪರಾಗಿ ರೆಡಿ ಮಾಡಿದ್ದಾರೆ..

ಹೌದು ವರ್ಷದಿಂದ ವರ್ಷಕ್ಕೆ ಹೊಸ ಹೊಸ ವಾಹನಗಳು ಮಾರುಕಟ್ಟೆಗೆ ಪರಿಚಯವಾಗ್ತಾನೆ ಇರುತ್ತೆ.. ಇದನ್ನ ನೋಡಿದ ಮಂದಿ ಆ ವಾಹನಗಳನ್ನ ಖರೀದಿ ಮಾಡೋ ಕಾತುರದಲ್ಲಿ ಇರ್ತಾರೆ.. ಇದರಿಂದ ಬೆಂಗಳೂರಿನಲ್ಲಿ ವಾಹನ ಸಂಖ್ಯೆ ಹೆಚ್ಚಾಗುತ್ತಿದ್ದು ಟ್ರಾಫಿಕ್ ಸಮಸ್ಯೆಯಿಂದ ಬೆಂಗಳೂರಿಗರೂ ರೋಸಿ ಹೋಗಿದ್ದಾರೆ.. ಇದಕ್ಕೆಲ್ಲ ಮುಕ್ತಿ ನೀಡಬೇಕು ಎಂದು ಬೆಂಗಳೂರಿನ ಏಳು ಜನರ ತಂಡ ಸಲ್ಯೂಷನ್ ಫಾರ್ ಪೊಲ್ಯೂಷನ್ ಎಂಬ ಹೆಸರಿನ ಅಡಿ ಹಳೆ ವಾಹನಗಳಿಗೆ ಹೊಸ ರೂಪವನ್ನ. ನೀಡೋಕ್ಕೆ ಮುಂದಾಗಿದೆ…

ಸತತ ನಾಲ್ಕೈದು ವರ್ಷದಿಂದ ಪರಿಶ್ರಮ ಪಟ್ಟು, ಅನೇಕ ಸಂಶೋಧನೆ ಮಾಡಿ ಸ್ವತಃ ತಾವೇ ಒಂದು ಹೊಸ ಇಂಜಿನ್ ಕಂಡು ಹಿಡಿದ್ದಾರೆ.. ಈ ಇಂಜಿನ್ ಗೆ ಡೀಸಲ್, ಪೆಟ್ರೋಲ್, ಗ್ಯಾಸ್ ನ ಅವಶ್ಯಕತೆ ಇಲ್ಲ.. ಸೊಲಾರ್ ನ ಮೂಲಕ ಈ ಇಂಜಿನ್ ರನ್ ಆಗುತ್ತೆ.. ಇದನ್ನ 92 ನೇ ಇಸವಿಯ ಹಳೆಯ ಆಟೋಗಳಿಗೆ ಅಳವಡಿಸಿ, ಆ ಆಟೋಗೆ ಹೊಸ ರೂಪವನ್ನ ಕೊಟ್ಟು ಬಹಳ ವಿನೂತನವಾಗಿ ವಿನ್ಯಾಸ ಮಾಡಿ ಎಲ್ಕ ರಿಕ್ ಎಂಬ ಹೆಸರು ಇಟ್ಟಿದ್ದಾರೆ.. ಇದಕ್ಕಾಗಿ ಈ ನಾಲ್ಕು ಜನ್ರು ಬಹಳಷ್ಟು ಪರಿಶ್ರಮ ವಹಿಸಿದ್ದಾರೆ.. ಬರೀ ಆಟೋ ಅಷ್ಟೇ ಅಲ್ಲದೇ ಹಳೆಯ ಟಾಟಾ ಎಸಿ, ಕಾರ್ , ಶಾಲಾ ಬಸ್ ಗಳಿಗೂ ಕೂಡ ಈ ಇಂಜಿನ್ ಅಳವಡಿಸೋಕ್ಕೆ ಮುಂದಾಗಿದ್ದಾರೆ.. ಈ ಇಂಜಿನ್ ಬೇರೆ ಎಲ್ಲ ಇಂಜಿನ್ ಗಳಿಗಿಂತ ವಿಭಿನ್ನವಾಗಿದೆ.. ಈ ಇಂಜಿನ್ ನಲ್ಲಿ ರನ್ ಆಗ್ತಾ ಇರೋ ಈ ಆಟೋಗಳು, ಹೊಸ ಆಟೋಗಳಿಗಿಂತ ಬಹಳ ವಿಭಿನ್ನವಾಗಿದೆ.. ಕ್ಲಚ್, ಗೇರ್, ಇಲ್ಲದೇ ಬರೀ ಎಕ್ಸಲೇಟರ್ ನಲ್ಲಿ ಈ ಆಟೋ ಸಂಚಾರ ಮಾಡುತ್ತೆ.. ಜೊತೆಗೆ ಉತ್ತಮ ಪಿಕಪ್ ಕೂಡ ನೀಡುತ್ತೆ ಅಂತಾರೆ ಇದನ್ನ ಕಂಡು ಹಿಡಿದ ಇಂಜಿನಿಯರ್ ಉಮೇಶ್ ..
ಇದನ್ನು ಓದಿ: ಕಾಡಿನ ಗುಹೆಯೊಳಗೆ ಡಿನ್ನರ್ ಪಾರ್ಟಿ...
ಈಗಾಗಲ್ಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಹೊಸ ಆವಿಷ್ಕಾರವನ್ನ ನೋಡಿ ಶಹಭಾಷ್ಗಿರಿಯು ಕೂಡ ನೀಡಿದೆ.. ಇನ್ನು ಕೆಲವೇ ದಿನಗಳಲ್ಲಿ ಈ ಆಟೋಗಳು ರಸ್ತೆಗೆ ಇಳಿಯಲ್ಲಿದೆ.. ಜೊತೆಗೆ ಆಟೋದಲ್ಲಿ ಜಿಪಿಎಸ್, ಟ್ಯಾಬ್ ನ ಸೌಕರ್ಯವನ್ನೂ ಕೂಡ ಕಲ್ಪಿಸಲ್ಲಿದ್ದಾರೆ.. ಈ ಹೊಸ ಆವಿಷ್ಕಾರಕ್ಕಾಗಿ ಯಾರ ನೆರವು ಪಡೆಯದೇ.ಬರೋಬರಿ 3 ಕೋಟಿ ರೂಪಾಯಿ ಹಣವನ್ನ ಖರ್ಚು ಮಾಡಿದ್ದಾರೆ,. ಇನ್ನು ಈ ಆಟೋ, ಟಾಟಾ ಎಸಿ, ಕಾರ್ ಗಳನ್ನ ಸಿದ್ಧ ಮಾಡೋದಕ್ಕೆ ಏಳು ಜನ ಸಿಇಒ ಗಳ ಜೊತೆ 40 ಕಾರ್ಮಿಕರು ಶ್ರಮವಹಿಸಿದ್ದಾರೆ… ನೀವು ಕೂಡ ನಿಮ್ಮ ಹಳೆಯ ವಾಹನವನ್ನ ಹೊಸ ರೂಪಕ್ಕೆ ತರಬೇಕು ಅಂದ್ರೆ ಇವರ ಬಳಿ ನೀಡಿದ್ರೆ ಸಾಕು, ಕೆಲವ ಮೂರು ದಿನಗಳಲ್ಲಿ ನಿಮ್ಮ ವಾಹನ ಪೆಟ್ರೋಲ್ ಡಿಸೇಲ್ ಇಲ್ಲದೇ ಬಹಳ ಹೈಟೆಕ್ ಆಗಿ ರೆಡಿಯಾಗುತ್ತೆ…

ಇನ್ನು ಈ ಇಂಜಿನಯರ್ ಗಳು ಅನೇಕ ಕಂಪನಿಗಳ ಜೊತೆ ಕೈಜೋಡಿಸಿ ಮುಂದಿನ ಎರಡು ವರ್ಷದಲ್ಲಿ ನಾಲ್ಕು ಲಕ್ಷ ಜನರಿಗೆ ಉದ್ಯೋಗ ಸೃಷ್ಠಿ ಮಾಡೋ ಉತ್ಸಾಹದಲ್ಲಿದ್ದಾರೆ.. ಇಷ್ಟೇಲ್ಲ ಹಣವನ್ನ ಖರ್ಚು ಮಾಡಿ ಸಾಕಷ್ಟು ಪರಿಶ್ರಮವನ್ನ ಪಟ್ಟಿರೋ ಇವರು ಇದೀಗ ಸರ್ಕಾರ ನೇರವು ಕೇಳ್ತಾ ಇದ್ದಾರೆ.. ಒಂದು ಪಕ್ಷ ಸರ್ಕಾರ ಇವರ ನೇರವಿಗೆ ಬಂದ್ರೆ ಮುಂದೋದು ದಿನ ನಗರದಲ್ಲಿ ವಾಯು ಮಾಲಿನ್ಯ ಶಬ್ಧ ಮಾಲಿನ್ಯ ಕಡಿಮೆಯಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ..
1. ಬೆಂಗಳೂರಿಗೆ ಕಾಲಿಡುತ್ತಿದೆ ಗರ್ಭಕೋಶ ಕಸಿ..
2. ಆನ್ಲೈನ್ನಲ್ಲಿ ಪೂಜಾ ಸಾಮಗ್ರಿ: ದೇಶ ವಿದೇಶದಲ್ಲೂ ಸತೀಶ್ ಸ್ಟೋರ್ಸ್ನ ಕಮಾಲ್
3. ಊರಿಗೆ ಹೋಗಬೇಕಾ..? ಹಾಗಾದ್ರೆ, ನಿಮ್ಮ ಸಾಕುಪ್ರಾಣಿಯನ್ನ ಇಲ್ಲಿ ಬಿಡಿ..!