Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ತಲೆನೋವು ಕೊಡುವ ಸಮಸ್ಯೆಗಳಿಗೆ ಬೆರಳ ತುದಿಯಲ್ಲೇ ಪರಿಹಾರ - ಈಗೇನಿದ್ರೂ ಲೋಕಲ್ ಓಯ್ ಸಮಾಚಾರ.. !

ಬಿಆರ್​ಪಿ ಉಜಿರೆ

ತಲೆನೋವು ಕೊಡುವ ಸಮಸ್ಯೆಗಳಿಗೆ ಬೆರಳ ತುದಿಯಲ್ಲೇ ಪರಿಹಾರ - ಈಗೇನಿದ್ರೂ ಲೋಕಲ್ ಓಯ್ ಸಮಾಚಾರ.. !

Tuesday February 09, 2016 , 3 min Read

ಈಗ ಎಲ್ಲರದ್ದೂ ಸಿಕ್ಕಾಪಟ್ಟೆ ಬ್ಯುಸಿ ಲೈಫ್.. ಆಫೀಸ್, ಬ್ಯುಸಿನೆಸ್, ಮೀಟಿಂಗ್ ತಿರುಗಾಟ ಹೀಗೆ ನೂರಾರು ಒತ್ತಡಗಳಲ್ಲೇ ನಾವು ಬದುಕುವ ಅನಿವಾರ್ಯತೆ ಸೃಷ್ಠಿಯಾಗಿದೆ. ಅದ್ರಲ್ಲೂ ನಗರ ಪ್ರದೇಶಗಳಲ್ಲಿ ವಾಸವಾಗಿರುವ ಮಂದಿಗಂತೂ ಯಾವುದಕ್ಕೂ ಪುರುಸೊತ್ತೇ ಇರೋದಿಲ್ಲ. ವಾರಪೂರ್ತಿ ಉಸಿರುಗಟ್ಟಿ ದುಡಿಯುವ ಸಿಟಿ ಲೈಫ್ ನಲ್ಲಿ ಕೊಂಚ ಉಸಿರಾಡೋಕ್ಕೆ ಟೈಂ ಸಿಗೋದು ವೀಕೆಂಡ್ ನಲ್ಲೇ. ಆದ್ರೆ ದಣಿದ ದೇಹಕ್ಕೆ, ಮನಸ್ಸಿಗೆ ಕೊಂಚ ರಿಲ್ಯಾಕ್ಸ್ ಬಯಸುವ ಬಹುತೇಕರು ವಾರದ ಕೊನೆಯ ದಿನವನ್ನ ರಿಫ್ರೆಶ್ ಆಗಲು ಮೀಸಲಿಡುತ್ತಾರೆ. ಹೀಗೆ ಬಿಡುವಿಲ್ಲದ ಜೀವನ ಶೈಲಿ ಮಧ್ಯೆ ದೈನಂದಿನ ಬದುಕಿನಲ್ಲಿ ಕೊಂಚ ಎಡವಟ್ಟಾದ್ರೂ ಆಕಾಶವೇ ಕಳಚಿ ಬಿದ್ದಂತ ಅನುಭವ ಅದೆಷ್ಟೋ ಮಂದಿಗೆ ಆಗುತ್ತದೆ. ಅದ್ರಲ್ಲೂ ಮನೆಯ ಸಣ್ಣಪುಟ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ಬೇಕು ಬೇಡಗಳನ್ನ ಗುರುತಿಸುವುದು ದೂರದ ಮಾತು. ಇಂತಹ ಕಿರಿಕಿರಿಗಳಿಂದ ತಪ್ಪಿಸಿಕೊಳ್ಳಲು ಹಾಗೂ ತಮ್ಮ ಸಮಸ್ಯೆಗಳಿಗೆ ಸೂಕ್ತ ನೆರವು ನೀಡಬಲ್ಲ ಸಾಥಿಗಾಗಿ ನಗರದ ಮಂದಿ ಸದಾ ಹುಡುಕುತ್ತಲೇ ಇರುತ್ತಾರೆ.. ಇಂತಹ ಜನರ ನೆರವಿಗೆ ನಿಂತಿರೋದು ಲೋಕಲ್ ಓಯ್ ಮೊಬೈಲ್ ಆಪ್. ನಿಮ್ಮ ಸಮಸ್ಯೆ ಎಂತದ್ದೇ ಆಗಿರಲಿ ಒಮ್ಮೆ ಲೋಕಲ್ ಓಯನ್ನ ಸಂಪರ್ಕಿಸಿದರೆ ಸಾಕು ನಿಮ್ಮ ತಲೆನೋವು ದೂರವಾದಂತೆ.

image


ಲೋಕಲ್ ಓಯ್ ವಿಶೇಷ ಸರ್ವೀಸ್ ಗಳನ್ನ ಹೊಂದಿರುವ ಆ್ಯಪ್‌. ನೀವು ಈ ಆ್ಯಪ್‌ ಅನ್ನು ಸಂಪರ್ಕಿಸಿದರೆ ಸಾಕು ನಿಮಗೆ ಬೇಕಾದ ವ್ಯಕ್ತಿಗಳು ಸಿಗುತ್ತಾರೆ. ಉದಾಹರಣೆಗೆ ನಿಮ್ಮ ಮನೆಯಲ್ಲಿ ಏಸಿ ಹಾಳಾಗಿದೆ ಅಂತಿಟ್ಟುಕೊಳ್ಳಿ. ಅರ್ಜೆಂಟಾಗಿ ಏಸಿ ರಿಪೇರಿ ಮಾಡುವವರು ಬೇಕಾಗಿದ್ದಾರೆ. ನೀವು ತಕ್ಷಣ ಲೋಕಲ್‌ಓಯ್ ಆ್ಯಪ್‌ಗೆ ಹೋದರೆ ಸಾಕು. ಅಲ್ಲಿ ರಿಕ್ವೆಸ್ಟ್‌ ಸಲ್ಲಿಸಿದರೆ ಏಸಿ ರಿಪೇರಿ ಮಾಡುವವರು ಮನೆಗೆ ಬರುತ್ತಾರೆ. ಅದೇ ರೀತಿ ಬ್ಯೂಟಿಷಿಯನ್‌ಗಳನ್ನೂ ಮನೆಗೆ ಕರೆಸಿಕೊಳ್ಳಬಹುದು. ಪ್ಲಂಬರ್‌, ಫ್ರೆಂಚ್‌ ಭಾಷೆ ಹೇಳಿಕೊಡುವವರು, ಫಿಟ್‌ನೆಸ್‌ ಟ್ರೇನರ್‌, ಬೇಬಿ ಕೇರ್, ಫಿಸಿಯೋ ಥೆರಪಿಸ್ಟ್‌, ತಿಗಣೆ ಕೊಲ್ಲುವವರು, ಅಡುಗೆ ಮಾಡುವವರು, ಕೇಕ್‌ ಮಾಡಲು ಕಲಿಸುವವರು, ಕಂಪ್ಯೂಟರ್‌ ರಿಪೇರಿ ಮಾಡುವವರು ಹೀಗೆ ಎಲ್ಲರೂ ಇಲ್ಲಿ ಸಿಗುತ್ತಾರೆ. ಇಲ್ಲಿ 8 ಪ್ರಮುಖ ವಿಭಾಗಗಳಲ್ಲಿ 120 ಸೇವೆ ಇಲ್ಲಿ ಸಿಗುತ್ತದೆ. ಬೇಡಿಕೆ ಸಲ್ಲಿಸಿದ ತಕ್ಷಣ ಮನೆಗೆ ಬಂದು ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತಾರೆ. ಇಂತಹ ವಿಭಿನ್ನ ಪರಿಕಲ್ಪನೆಯನ್ನ ಹುಟ್ಟು ಹಾಕಿದ್ದು ಐಎಂಎಂಎ ವೆಬ್ ಪ್ರೈ.ಲಿ... 2013ರಲ್ಲಿ ಕಂಪನಿಯ ಸಿಇಒ ಆದಿತ್ಯ ರಾವ್ ಲೋಕಲ್ ಓಯನ್ನ ಅಸ್ಥಿತ್ವಕ್ಕೆ ತಂದ್ರು.

image


“ ಲೋಕಲ್ ಓಯ್ ಒಂದು ಪಕ್ಕಾ ಯೋಜನೆಯೊಂದಿಗೆ ಶುರುವಾಗಿರುವ ಆ್ಯಪ್‌. ಜನ ಸ್ಥಳೀಯ ವೃತ್ತಿಪರ ಸರ್ವೀಸ್ ಗಳ ನಿರೀಕ್ಷೆಯಲ್ಲೇ ಸದಾ ಇರ್ತಾರೆ. ಆದ್ರೆ ಜನರಿಗೆ ಕಾಯುವ ತಾಳ್ಮೆ ಇರೋದಿಲ್ಲ. ಇದನ್ನ ಗಮನದಲ್ಲಿಟ್ಟುಕೊಂಡು ಜನರ ದೈನಂದಿನ ಬದುಕಿಗೆ ನೆರವಾಗಬಲ್ಲ ಸರ್ವೀಸನ್ನ ನೀಡಲು ನಿರ್ಧರಿಸಿ ಲೋಕಲ್ ಓಯ್ ಆರಂಭಿಸಿದೆವು. ” ಆದಿತ್ಯ ರಾವ್, ಲೋಕಲ್ ಓಯ್ ಸಿಇಒ

ಇದನ್ನು ಓದಿ

ಮನೆಬಾಗಿಲಿಗೆ ಬರುತ್ತೆ ಮನೆ ಮೆಚ್ಚುವ ಮೊಗ್ಗಿನ ಜಡೆ..!

ಲೋಕಲ್ ಓಯ್ ತನ್ನ ವಿಭಿನ್ನ ಹಾಗೂ ಕ್ಷಮತೆಯುಳ್ಳ ಸರ್ವೀಸ್ ಮೂಲಕ ಜನರಿಗೆ ಸಾಕಷ್ಟು ಹತ್ತಿರವಾಗಿದೆ. ಟೆಕ್ನಾಲಜಿಯ ನೆರವು ಪಡೆದಿರುವ ಲೋಕಲ್ ಓಯ್ ಪಕ್ಕಾ ಸರ್ವೀಸ್ ನೀಡೋದ್ರಲ್ಲಿ ಯಶಸ್ಸು ಕಂಡಿದೆ. ಇದ್ರಲ್ಲಿರೋ ತಂತ್ರಜ್ಞಾನ ಗ್ರಾಹಕರು ಬಯಸಿದ ಸರ್ವೀಸನ್ನ ತಕ್ಷಣ ಗುರುತಿಸುತ್ತದೆ. ಅಲ್ಲದೆ ಅವರಿಗೆ ಕೊಡಬಹುದಾದ ಉತ್ತಮ ಸೇವೆಗಳನ್ನ ಹುಡುಕುತ್ತದೆ. ವಿಶೇಷ ಅಂದ್ರೆ ಗ್ರಾಹಕರ ಅಗತ್ಯತೆ ಹಾಗೂ ಬಜೆಟ್ ಗೆ ತಕ್ಕಂತೆ ಸರ್ವೀಸ್ ನೀಡಲಾಗುತ್ತದೆ. ಒಮ್ಮೆ ಸರ್ವೀಸ್ ಪೂರ್ಣಗೊಂಡ ನಂತ್ರ ಆ್ಯಪ್‌ ನ ಇತರೆ ಸಹವರ್ತಿಗಳಿಗೆ ಸಂದೇಶ ರವಾನಿಸುತ್ತದೆ. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯೋಗಗಳನ್ನ ಕಂಡಿರುವ ಲೋಕಲ್ ಓಯ್ ಭರ್ಜರಿ ಯಶಸ್ಸಿನತ್ತ ಕಾಲಿಡುತ್ತಿದೆ. ಇನ್ನು ಲೋಕಲ್ ಓಯ್ ಬಗ್ಗೆ ಗ್ರಾಹಕರೂ ಖುಷಿ ವ್ಯಕ್ತಪಡಿಸಿದ್ದಾರೆ. ಕೇವಲ 12 ತಿಂಗಳಲ್ಲೇ ಇದು ಮನೆ ಮಾತಾಗಿದ್ದು 2015ರಲ್ಲಿ ಪ್ರತೀ ದಿನ 150ಕ್ಕೂ ಹೆಚ್ಚು ಸರ್ವೀಸ್ ಗಳನ್ನ ನೀಡಿರೋದು ಇದಕ್ಕೆ ಸಾಕ್ಷಿ. ಸದ್ಯ ಲೋಕಲ್ ಓಯ್ ದಿನವೊಂದಕ್ಕೆ 2000 ದಿಂದ 2500 ರಷ್ಟು ಸರ್ವೀಸ್ ರಿಕ್ವೆಸ್ಟ್ ಗಳನ್ನ ಪಡೆಯುತ್ತಿದೆ.

image


“ ಲೋಕಲ್ ಓಯ್ ದೈನಂದಿನ ಬದುಕಿಗೆ ಬೇಕಾದ ಸರ್ವೀಸ್ ಗಳನ್ನ ನೀಡುತ್ತಿದೆ. ನಮ್ಮ ಮನೆಯಲ್ಲಿ ಯಾವುದೇ ತೊಂದರೆಗಳು ಕಂಡು ಬಂದರೂ ನಾನು ಲೋಕಲ್ ಓಯನ್ನ ಸಂಪರ್ಕಿಸುತ್ತೇನೆ. ಅದ್ರಲ್ಲೂ ಫಿಟ್ನೆಸ್, ಬೇಬಿ ಕೇರ್ ನಂತಹ ಸರ್ವೀಸ್ ಗಳು ಬಹಳ ಉತ್ತಮವಾಗಿವೆ. ” ವಂದನಾ, ಲೋಕಲ್ ಓಯ್ ಗ್ರಾಹಕರು

ಹೀಗೆ ಗ್ರಾಹಕರ ಮನ ಗೆದ್ದಿರುವ ಲೋಕಲ್ ಓಯ್ ಇನ್ನಷ್ಟು ತನ್ನ ಸೇವೆಯನ್ನ ಉತ್ತಮಪಡಿಸುತ್ತ ಗಮನ ನೀಡುತ್ತಿದೆ. ಈ ವರ್ಷದ ಆರಂಭದಲ್ಲೂ ಭರ್ಜರಿ ಸರ್ವೀಸ್ ಗಳನ್ನ ನೀಡುತ್ತಿದೆ. ಲೋಕಲ್ ಓಯ್ ಇರೋದ್ರಿಂದ ಈಗ ಎಲ್ಲವೂ ಸುಲಭ. ಬೆರಳ ತುದಿಯಲ್ಲೇ ಎಲ್ಲವೂ ಇರುತ್ತದೆ. ಹಾಗಾಗಿ ಒಂದೋ ಆ್ಯಪ್‌ ಡೌನ್‌ಲೋಡ್‌ ಮಾಡಿ ನಿಮ್ಮ ಬೇಡಿಕೆ ಸಲ್ಲಿಸಬಹುದು. ತಕ್ಷಣವೇ ಸ್ಪಂದಿಸುವ ಲೋಕಲ್ ಓಯ್ ನಿಮ್ಮನ್ನ ನಿರಾಳವನ್ನಾಗಿಸುತ್ತೆ.

ಇದನ್ನು ಓದಿ

ರಿಯಲ್ ಎಸ್ಟೇಟ್ ಉದ್ಯಮಿಯಿಂದ ಸಮಾಜಮುಖಿ ಕಾರ್ಯ

ಕಾರ್ಪೋರೇಟ್ ಕ್ರಿಕೆಟ್​​ನ ಯಶಸ್ವಿ ಸಾರಥಿ

ಆಕಾಶದಲ್ಲಿ ಹಾರಾಡೋದಿಕ್ಕೊಂದು ಅವಕಾಶ !